Monday, April 21, 2025
Google search engine

Homeರಾಜ್ಯಸುದ್ದಿಜಾಲಯುವಕರು ಕೆಂಪೇಗೌಡರ ನಾಯಕತ್ವದ ಗುಣ ಅಳವಡಿಸಿಕೊಳ್ಳಿ: ಡಾ. ಅವಿನಾಶ್ ಮೆನನ್‌ ರಾಜೇಂದ್ರನ್

ಯುವಕರು ಕೆಂಪೇಗೌಡರ ನಾಯಕತ್ವದ ಗುಣ ಅಳವಡಿಸಿಕೊಳ್ಳಿ: ಡಾ. ಅವಿನಾಶ್ ಮೆನನ್‌ ರಾಜೇಂದ್ರನ್

ರಾಮನಗರ: ಬೆಂಗಳೂರು ಪ್ರಪಂಚಾದ್ಯಂತ ವ್ಯಾಪಾರ ವಹಿವಾಟಿನಲ್ಲಿ ಇಂದು ಅಗ್ರಸ್ಥಾನದಲ್ಲಿದೆ. ಇದಕ್ಕೆ ಕೆಂಪೇಗೌಡರು ಮೊದಲು ಅಡಿಪಾಯ ಹಾಕಿದರು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಅಭಿಪ್ರಾಯಪಟ್ಟರು.

ಅವರುಜೂ.೨೭ರ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂದು ಕೆಂಪೇಗೌಡರು ಇಡೀ ಬೆಂಗಳೂರಿನ ಸುತ್ತಮುತ್ತಲು ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು.ಅದೇರೀತಿ ನೀವು ನಿಮ್ಮ ಅವಕಾಶಗಳನ್ನು ಕೇವಲ ಜಿಲ್ಲೆಗೆ ಸೀಮಿತಗೊಳಿಸಿಕೊಳ್ಳಬೇಡಿ.ದೇಶಾದ್ಯಂತ ಉದ್ಯೋಗ ನಿರ್ವಹಿಸುವಂತಹ ಮಾನಸಿಕ ಸ್ಥಿತಿಯನ್ನು ರೂಡಿ ಮಾಡಿಕೊಳ್ಳಬೇಕು. ಈ ಸಂದೇಶವನ್ನುಎಲ್ಲಾ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇಲ್ಲಿ ನೆರೆದಿರುವ ಎಲ್ಲಾ ತಂದೆತಾಯಂದಿರಿಗೆ ನಾನು ಮನವಿ ಮಾಡುತ್ತಿದ್ದೇನೆತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ವಿಷಯಗಳಲ್ಲಿ ಕೇವಲ ಜಿಲ್ಲೆಗೆ ಸೀಮಿತಗೊಳಿಸಬೇಡಿ ದೇಶಾದ್ಯಂತ ಅಪಾರ ಅವಕಾಶಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಜಾನಪದ ವಿದ್ವಾಂಸರು ಹಾಗೂ ಸಾಹಿತಿಗಳಾದ ಡಾ. ಬೈರೇಗೌಡಅವರು ಮಾತನಾಡಿ, ಕೆಂಪೇಗೌಡರುಎಲ್ಲಾ ಸಮುದಾಯದವರೆಗೆ ಅನುಕೂಲವಾಗುವಂತೆ ೧೬ ಪೇಟೆಗಳನ್ನು ನಿರ್ಮಿಸಿದರು ಇದುಅವರು ಸಮುದಾಯಗಳ ಅಭಿವೃದ್ಧಿಗೆಕೈಗೊಂಡಿರುವಅಭಿವೃದ್ಧಿ ಕಾರ್ಯಗಳಾಗಿದ್ದವು ಬೆಂಗಳೂರು ಸುತ್ತಮುತ್ತಲು ಸಾವಿರಾರು ಕೆರೆಗಳನ್ನು ನಿರ್ಮಿಸಿದ್ದರು.ಅವರಜನೋಪಕಾರಿ ಕಾರ್ಯಗಳು ಇಂದಿಗೂ ಮಾದರಿಯಾಗಿವೆಎಂದು ತಿಳಿಸಿದರು.

ಯುವಕರುಅವರ ಆದರ್ಶಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕೆಂಪೇಗೌಡರುರೈತಾಪಿ ಜನರಿಗೆ ಕೃಷಿಗೆ ಅನುಕೂಲವಾಗುವಂತೆ ಕೆರೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದರು ಹಲವಾರು ದೇವಸ್ಥಾನಗಳನ್ನು ನಿರ್ಮಿಸಿ ಹಲವಾರು ವರ್ತಕರಿಗೆಆಶ್ರಯವನ್ನು ನೀಡಿದರು ಅಂದಿನ ಕಾಲದಲ್ಲೇ ಬೆಂಗಳೂರನ್ನು ಮಾದರಿ ಬೆಂಗಳೂರನ್ನಾಗಿ ನಿರ್ಮಿಸಿದ್ದರು ಇದಕ್ಕೆಅವರು ಬೆಂಗಳೂರಿನ ನಾಲ್ಕು ಮೂಲೆಯಲ್ಲಿ ನಿರ್ಮಿಸಿದ್ದ ಕೋಟೆಗಳೆ ಸಾಕ್ಷಿಯಾಗಿದೆಎಂದರು. ಇದೇ ಸಂದರ್ಭದಲ್ಲಿಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡಿಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕಲೆ, ಸಾಹಿತ್ಯ ಮತ್ತುಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಗಣ್ಯರಿಗೆ ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆಗೆ ಶ್ರೀ ಆದಿಚುಂಚನಗಿರಿರಾಮನಗರ ಶಾಖಾ ಮಠದ ಮಠಾಧಿಕಾರಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿಡಾ.ಅವಿನಾಶ್ ಮೆನನ್‌ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ದಿಗ್ವಿಜಯ್ ಬೋಡ್ಕೆಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿಅಪರಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಎನ್. ಎಚ್‌ರಾಮಚಂದ್ರ, ರಾಮನಗರಅಭಿವೃದ್ಧಿ ಪ್ರಾಧಿಕಾ ಅಧ್ಯಕ್ಷರಾದಚೇತನ್, ನಾಡಪ್ರಭುಕೆಂಪೇಗೌಡ ಸಮಿತಿಯಅಧ್ಯಕ್ಷ ಚಂದ್ರಣ್ಣ, ಕಾರ್ಯದರ್ಶಿಗಳಾದ ರವಿ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಾದರಮೇಶ್ ಬಾಬು ಟಿ.ಜಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular