Saturday, April 19, 2025
Google search engine

Homeರಾಜ್ಯಸುದ್ದಿಜಾಲಯುವಕರು ದೇಶಕ್ಕೆ ಆಸ್ತಿಯಾಗಬೇಕು : ಪ್ರೊ. ಮಹೇಶ್‌ ಚಂದ್ರಗುರು

ಯುವಕರು ದೇಶಕ್ಕೆ ಆಸ್ತಿಯಾಗಬೇಕು : ಪ್ರೊ. ಮಹೇಶ್‌ ಚಂದ್ರಗುರು

ಮೈಸೂರು: ಯುವಕರು ದೇಶಕ್ಕೆ ಆಸ್ತಿಯಾಗಬೇಕು ಜೊತೆಗೆ ಹೋರಾಟದ ಪರಿಕಲ್ಪನೆಯನ್ನು ಬೆಳೆಸಿಕೊಂಡು, ಕೀಳರಿಮೆ ಬಿಟ್ಟು ಸತ್ತಮೇಲು ಬದುಕುವಂತಹ ಚಾರಿತ್ರ್ಯವನ್ನು ಸಂಪಾದಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಪಿ.ಮಹೇಶ್‌ಚಂದ್ರಗುರು ಕರೆ ನೀಡಿದರು.

ಬೋಗಾದಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ರವರ ೬೭ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಶಕ್ತಿ ಭಾರತದಲ್ಲಿ ಅಡ್ಡದಾರಿ ಹಿಡಿದುಕೊಂಡು ಗ್ರಂಥಗಳನ್ನು ಓದದೆ ಮೊಬೈಲ್‌ನ ಸಾಮಾಜಿಕ ಜಾಲತಾಣದ ಹಿಂದೆ ಓಡುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದ ಅವರು ಅಂಬೇಡ್ಕರ್‌ರವರು ದಿನಕ್ಕೆ ೨೦ ಗಂಟೆ ಓದುತ್ತಿದ್ದರು. ವಿದ್ಯೆ ಯಾರ ಸ್ವತ್ತು ಅಲ್ಲ, ವಿದ್ಯೆಯನ್ನು ಸಂಪಾದನೆ ಮಾಡಿದರೆ ಇಡೀ ಪ್ರಪಂಚ ನಿಮ್ಮ ಹಿಂದೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಚೆನ್ನಾಗಿ ಓದಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಡಿಗ್ರಿಗಳನ್ನು ಪಡೆದರೆ ಸಾಲದು ಕೌಶಲ್ಯಶೀರಾಗಬೇಕು, ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ನಾನು ಹುಟ್ಟಿರುವುದೇ ಗೆಲ್ಲುವುದಕೊಸ್ಕರ ಎಂದು ತಿಳಿದುಕೊಂಡು ಅಂಬೇಡ್ಕರ್‌ರವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕೆಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಬಿ.ರಂಗೇಗೌಡ ಮಾತನಾಡಿ ಅಂಬೇಡ್ಕರ್‌ರವರು ದೈಹಿಕವಾಗಿ ದೂರವಾಗಿರಬಹುದು ಆದರೆ ಅವರ ಆದರ್ಶಗಳು ಜಗತ್ತಿಗೆ ಬೇಕಾಗಿವೆ, ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಓದಬೇಕು, ಅಂಬೇಡ್ಕರ್ ಮತ್ತು ವಿವೇಕಾನಂದರು ನನಗೆ ಆದರ್ಶರಾಗಿದ್ದಾರೆ ಇವರಿಬ್ಬರನ್ನು ಅರ್ಥಮಾಡಿಕೊಂಡರೆ ದೇಶವನ್ನು ತಿಳಿದುಕೊಂಡಂತೆ ಎಂದ ಅವರು ಎಲ್ಲರೂ ಚೆನ್ನಾಗಿ ಓದಿ ಶಿಸ್ತಿನಿಂದ ಬಾಳಿ ಬದುಕಿ ತೋರಿಸಬೇಕು ಎಂದರು.

ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್.ಸೋಮಶೇಖರ್ ಮಾತನಾಡಿ ಅಂಬೇಡ್ಕರ್‌ರವರು ಭಾರತೀಯ ನಾಗರೀಕತೆಗೆ ಬೆಳಕನ್ನು ಕೊಟ್ಟವರು, ಅವರು ನಮಗೆ ದಾರಿದೀಪ, ಅವರು ವಿಶ್ವದ ಜ್ಞಾನ ಭಂಡಾರವಾಗಿದ್ದು ಅವರು ಹುಟ್ಟಿದ ದಿನವನ್ನು ವಲ್ಡ್ ನಾಲೇಡ್ಜ್ ಡೇ ಎಂದು ಕರೆಯುತ್ತಾರೆ. ಆದ್ದರಿಂದ ಪ್ರತಿಯೊಂದು ಸೆಕೆಂಡಿಗೂ ಬೆಲೆ ಇದ್ದು ಸಮಯ ವ್ಯರ್ಥ ಮಾಡದೆ ಚೆನ್ನಾಗಿ ಓದಿ ಸ್ವಾವಲಂಬಿಗಳಾಗಿ ಎಂದರು.

ಸಮಾರಂಭದಲ್ಲಿ ಸಹಾಯಕ ನಿರ್ದೇಶಕ ಕೆ.ಸಿದ್ದಲಿಂಗು, ಎಂ.ತಿಬ್ಬಯ್ಯ, ಸೋಮಯ್ಯ, ಮಲೆಯೂರು ಪ್ರಭಂಜನ್, ನಿಲಯ ಪಾಲಕ ಚಿಕ್ಕೀರಯ್ಯ, ನಂಜಯ್ಯ, ಎಂ.ಮಹೇಶ್, ಪ್ರದೀಪ್, ಎಸ್.ಮಹೇಶ್, ಹಾಗೂ ಕಛೇರಿ ಸಿಬ್ಬಂದಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ರವರಿಗೆ ವಿದ್ಯಾರ್ಥಿಗಳಿಂದ ದೀಪ ನಮನ ಕಾರ್ಯಕ್ರಮ ನಡೆಯಿತು ನಂತರ ಅಂಬೇಡ್ಕರ್ ಚಲನಚಿತ್ರ ಪ್ರದರ್ಶಿಸಲಾಯಿತು.

RELATED ARTICLES
- Advertisment -
Google search engine

Most Popular