ಮೈಸೂರು: ದೇಶದಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದ್ದುಬೇರೆದೇಶಕ್ಕೆ ಹೋಗದೆ ನಮ್ಮದೇಶದಲ್ಲಿಯೇ ಕೆಲಸ ಮಾಡಿದೇಶದ ಋಣತೀರಿಸಲು ಯುವಜನತೆ ಮುಂದಾಗಬೇಕೆಂದು ಎಂ.ಡಿ.ಎ ಅಧ್ಯಕ್ಷ ಕೆ.ಮರೀಗೌಡಕರೆ ನೀಡಿದರು.
ಕುವೆಂಪುನಗರದ ಸಾಮ್ರಾಟ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗರದಾರರ ಸಂಘ ಹಾಗು ಮೈಸೂರುಜಿಲ್ಲಾ ಸಮಿತಿಯ ಸಹಯೋಗದೊಂದಿಗೆಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯುತ್ ಗುತ್ತಿಗೆದಾರರ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಈ ದೇಶದ ಸಂಪತ್ತು ಇಂದಿನ ಸ್ಪರ್ಧಾತ್ಮಕಯುಗದಲ್ಲಿಪೈಪೋಟಿ ನಡೆಸಬೇಕಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಗುರಿ, ಛಲ ಇಟ್ಟುಕೊಂಡುಸಾಧನೆ ಮಾಡಿತಂದೆತಾಯಿ ಮತ್ತುದೇಶಕ್ಕೆ ಕೀರ್ತಿತರಬೇಕುಎಂದಅವರು ವಿದ್ಯುತ್‌ಗುತ್ತಿಗೆದಾರರುಗುಣಮಟ್ಟದ ಕೆಲಸ ಮಾಡಿದರೆ ಸಾರ್ವಜನಿಕರಿಗೆ ನಿರಂತರ ವಿದ್ಯುತ್ ನೀಡಬಹುದು, ಸಂಘಕ್ಕೆ ಸಮುದಾಯದ ಭವನ ನಿರ್ಮಿಸಲು ಮೂಡಾದಿಂದ ಸಿ.ಎ ನಿವೇಶನ ಕೇಳಿದ್ದೀರಿ, ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರ ನಡೆಸಿ ಪ್ರೋತ್ಸಾಹಿಸಿದರೆ ನೂರಕ್ಕೆ ನೂರು ಸಿ ಎ ನಿವೇಶನ ಮಂಜೂರುಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಶ್ರೀರಂಗಪಟ್ಟಣ ಕ್ಷೇತ್ರದಶಾಸಕರು ಹಾಗು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾದ ಎ.ಬಿ.ರಮೆಶ್ ಬಂಡಿ ಸಿದ್ದೇಗೌಡ ಮಾತನಾಡಿ ನಮ್ಮಲ್ಲಿ ಲೈನ್ ಮ್ಯಾನ್ ಸಂಖ್ಯೆಕಡಿಮೆಇದ್ದುಇತ್ತೀಚೆಗೆ ವಿದ್ಯುತ್ ಅವಗಢಗಳು ಹೆಚ್ಚಾಗುತ್ತಿವೆ, ಗುತ್ತಿಗೆದಾರರು ವಿದ್ಯುತ್ ಅವಘಡಗಳಿಗೆತಕ್ಷಣ ಸ್ಪಂದಿಸಿಕೆಲಸ ಮಾಡಬೆಕು, ಭಾರತಅತ್ಯಂತ ಹೆಚ್ಚು ಮಾನವ ಸಂಪನ್ಮೂಲ ಇರುವದೇಶ, ಪ್ರಪಂಚದಅತ್ಯಂತಉನ್ನತ ಹುದ್ದೆಗಳಲ್ಲಿ ನಮ್ಮದೇಶದಯುವಕರಿದ್ದಾರೆ.
ವಿದ್ಯಾರ್ಥಿಗಳುಹಿಂದೆಗುರು, ಮುಂದೆಗುರಿಇಟ್ಟುಕೊಂಡುಸಾಧನೆ ಮಾಡಿಎಂದರು, ನಿಮ್ಮ ಸಂಘದ ಮಕ್ಕಳಿಗೆ ಉಚಿತ ನೀಟ್‌ತರಬೆತಿ ನೀಡಲು ಪ್ರಯತ್ನ ಮಾಡುತ್ತೇನೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದುಅತ್ಯಂತಅಗತ್ಯವಾಗಿದ್ದು ನಿಮ್ಮ ಸಂಘ ರಾಜ್ಯದಲ್ಲಿಅತ್ಯಂತ ಬಲಿಷ್ಠವಾಗಿ ಯಶಸ್ವಿಯಾಗಿ ಬೆಳೆಯಲಿಎಂದರು.
ಸಮಾರಂಭದಲ್ಲಿ ರಾಜ್ಯ ವಿದ್ಯುತ್‌ಗುತ್ತಿಗೆದಾರರ ಸಂಘದಗೌರವಅಧ್ಯಕ್ಷರಾದ ಸಿ.ರಮೆಶ್, ಜಿಲ್ಲಾಅಧ್ಯಕ್ಷರಾದ ಹೆಚ್.ಜೆ. ರಾಘವೆಂದ್ರ, ಸೆಸ್ಕ್‌ನತಾಂತ್ರಿಕ ನಿರ್ದೇಶಕರಾದ ಮುನಿಗೋಪಾಲ್.ಕೆ.ಎಂ, ಸುನಿಲ್ ಕುಮಾರ್.ಎ.ಎಂ, ಪೂರ್ಣಚಂದ್ರ ತೇಜಸ್ವಿ, ಅನಿತಾಎಸ್ ಬಿ. ಅಭಿಲಾಷ್‌ಕೆ.ಎಸ್, ಸುದರ್ಶನ್, ರವೀಶ್, ಕಿರಣ್.ಎಸ್, ನವೀನ್‌ಚಂದ್ರ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.