Saturday, April 19, 2025
Google search engine

Homeಸ್ಥಳೀಯಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು: ಸರಗೂರು ಠಾಣಾ ಸಿಪಿಐ ಲಕ್ಷ್ಮೀಕಾಂತ್

ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು: ಸರಗೂರು ಠಾಣಾ ಸಿಪಿಐ ಲಕ್ಷ್ಮೀಕಾಂತ್


ಸರಗೂರು: ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು ಎಂದು ಸರಗೂರು ಠಾಣಾ ಸಿಪಿಐ ಲಕ್ಷ್ಮೀಕಾಂತ್ ತಿಳಿಸಿದರು, ಪಟ್ಟಣದ ಜೂನೀಯರ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಟಪರಿಣಾಮಗಳು, ಬಾಲ್ಯ ವಿವಾಹ ನಿಷೇದಕಾಯ್ದೆ ಮತ್ತು ಮಕ್ಕಳ ವಿರುದ್ದ ಲೈಂಗಿಕ ಅಪರಾಧ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಮಾದಕ ವಸ್ತುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಅದರಲ್ಲೂ ಯುವಕರೇ ಹೆಚ್ಚಾಗಿ ಮಾದಕ ವಸ್ಥುಗಳನ್ನು ಸೇವನೆ ಮಾಡುತ್ತಿರುವುದು ಆತಂಕದ ವಿಚಾರ. ಸಾರ್ವಜನಿಕರ ಸ್ಥಳಗಳಲ್ಲಿ ಮಾದಕ ವಸ್ತುಗಳ ಸೇವನೆ ಅಪರಾಧವಾಗಿದ್ದು, ದಂಡವನ್ನೂ ವಿಧಿಸಲಾಗುವುದು. ಹೀಗಾಗಿ ಯುವಕರು ಇಂತಹ ಸೇವನೆಯಿಂದ ದೂರವಿರಬೇಕು.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರ ಸ್ಥಳ ಹಾಗೂ ಶಾಲಾ ಕಾಲೇಜು ಆವರಣದಲ್ಲಿ ಬೈಕ್ ವೀಲಿಂಗ್, ಮಾಡವುದು ವಿದ್ಯಾರ್ಧಿನಿಯರಿಗೆ ಚುಡಾಯಿಸುವುದು ಕೆಟ್ಟದೃಷ್ಟಿಯಿಂದ ನೋಡುವುದು, ಕಂಡು ಬಂದಲ್ಲಿ ನಿರ್ದಿಷ್ಟವಾಗಿ ಕಾನೂನುಕ್ರಮ ಜರುಗಿಸಲಾಗುವುದು, ಹಾಗೆ ೧೮ ವರ್ಷ ತುಂಬದೆ ಇರುವ ಹೆಣ್ಣು ಮಕ್ಕಳಿಗೆ ಪೋಷಕರು ಮದುವೆ ಮಾಡುವುದು ಬಾಲ್ಯ ವಿವಾಹ ಕಾಯ್ದೆಯಲ್ಲಿ ವಿರೋಧವಾಗಿರುತ್ತದೆ ಎಂದರು.
ಸರಗೂರು ಠಾಣಾ ಪಿಎಸ್‌ಐ,ಶ್ರವಣದಾಸ್‌ರೆಡ್ಡಿ ಮಾತನಾಡಿ ಮಾದಕ ವಸ್ತುಗಳು ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಕೂಡಿದ್ದು ಇದರಿಂದ ಆರೋಗ್ಯದ ಮೇಲೆ ನೆರವಾಗಿ ದುಷ್ಪರಿಣಾಮ ಬೀರಲಿದೆ. ಬಾಯಿ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್, ಹೊಟ್ಟೆ ಹುಣ್ಣು ಸೇರಿದಂತೆ ಇನ್ನಿತರ ರೋಗಗಳು ಕಾಣಿಸಿಕೊಳ್ಳಲಿವೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೋಳ್ಳದೆ, ಎಲ್ಲರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರು, ಹಾ
ಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular