ರಾಮನಗರ: ಚನ್ನಪಟ್ಟಣ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭೆ-೨೦೨೪ರ ಚುನಾವಣೆ ಅಂಗವಾಗಿ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಹಾಗೂ ಸೆಲ್ಫಿ ವಿಥ್ ವೋಟಿಂಗ್ ಕಾರ್ಯಕ್ರಮದ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾಯನಿರ್ವಾಹಕ ಅಧಿಕಾರಿ ಮನು ಬಿ.ಕೆ. ಅವರು ಮಾತನಾಡಿ ೧೮ ವರ್ಷ ಪೂರೈಸಿದ ಎಲ್ಲಾ ವಿದ್ಯಾರ್ಥಿಗಳು ಮತ ಚಲಾಯಿಸುವುದರ ಜೊತೆಗೆ ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವ ತಿಳಿಸಿ ಎಲ್ಲಾ ಸಾರ್ವಜನಿಕರು ಮತದಾನದಲ್ಲಿ ಪಾಲ್ಗೋಳ್ಳುವಂತೆ ಮಾಡುವ ಶಕ್ತಿ ವಿದ್ಯಾರ್ಥಿಗಳಿಗೆ ಇದೆ ಎಂದು ಮತದಾನದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು. ಮತದಾನ ನಮ್ಮಲ್ಲೆರ ಹಕ್ಕು, ಒಂದೊಂದು ಮತಕ್ಕೂ ಸಹ ಸೋಲು ಗೆಲುವು ನಿರ್ಧರಿಸುವ ಶಕ್ತಿ ಇದೆ, ಸರ್ಕಾರವನ್ನು ರೂಪಿಸುವ ಜವಬ್ದಾರಿ ಯುವ ಮತದಾರರ ಕೈಯಲ್ಲೆ ಇರುತ್ತದೆ. ಆದ್ದರಿಂದ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡುವಂತೆ ತಿಳಿಸಿದರು.
ಪ್ರಥಮ ದರ್ಜೆ ಕಾಲೇಜಿನ ಮುಖ್ಯೋಪಾಧ್ಯಯರಾದ ಡಾ. ವೆಂಕಟೇಶ್ ಅವರು ಮಾತನಾಡಿ, ಕಡ್ಡಾಯ ಮತ್ತು ನೈತಿಕ ಮತದಾನದ ಬಗ್ಗೆ ಅರಿವು ಮೂಡಿಸಿ, ವಿದ್ಯಾವಂತರಾದ ನೀವು ನಿಮ್ಮ ಕುಟುಂಬದವರಿಗೆ, ಸ್ನೇಹಿತರು, ಸುತ್ತಮುತ್ತಲಿನ ಜನರಿಗೆ ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ, ನಂತರ ಸಿ-ವಿಜಿಲ್ ಆಪ್ ಮೂಲಕ ಚುನಾವಣಾ ಅಕ್ರಮಗಳ ವರದಿ ಮಾಡುವುದು, ಮತಗಟ್ಟೆಗಳ ಪತ್ತೆ ಹಚ್ಚುವಿಕೆ, ಮತದಾರರ ಪಟ್ಟಿಯಲ್ಲಿ ಹೆಸರು ಶೋಧನೆ ಮೊದಲಾದ ವಿಯಗಳನ್ನು ತಿಳಿಸಲಾಯಿತು. ಮತಗಟ್ಟೆಗೆ ಲಭ್ಯವಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿಸಲಾಯಿತು. ಇ.ವಿ.ಎಂ ಬಳಕೆ ಕುರಿತು ತಿಳಿಸಲಾಯಿತು.

ಜಾಗೃತಿ ಕಾರ್ಯಕ್ರಮದಲ್ಲಿ ಸಂಜೀವಿನಿ ವಿಭಾದ ಟಿಪಿಎಂ ಹರೀಶ್ ಬಾಬು, ತಾಲ್ಲೂಕು ಐ.ಇ.ಸಿ ಸಂಯೋಜಕರಾದ ಭವ್ಯ, ಅಧ್ಯಾಪಕ ವೃಂದದವರು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಗೂ ಇತರರು ಭಾಗಿಯಾಗಿದ್ದರು.