ಮಂಡ್ಯ: ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್ ಪಿ ಎನ್ ಯತೀಶ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, ಗಣೇಶ ಕೂರಿಸುವ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ನೆನ್ನೆ(ಮಂಗಳವಾರ) ರಾತ್ರಿ ಮಂಡ್ಯದ ಗಾಂಧಿನಗರದಲ್ಲಿ ಅಕ್ಷಯ್ (22) ೆಂಬ ಯುವಕನ ಕೊಲೆಯಾಗಿತ್ತು.
ರಾತ್ರಿ ಕೊಲೆ ಪ್ರಕರಣ ನಡೆದಿದೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಯುವಕರ ನಡುವೆ ಗಲಾಟೆಯಾಗಿ ಮೃತ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಬಳಿಕ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಎನ್ ಯತೀಶ್ ಮಾಹಿತಿ ನೀಡಿದರು.
ಪ್ರಾಥಮಿಕ ತನಿಖೆಯಲ್ಲಿ ಗಣೇಶ ಕೂರಿಸುವ ವಿಚಾರ ಹಾಗೂ ಹಳೆ ವೈಷಮ್ಯಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ ಎಂದರು.
ಆರೋಪಿಗಳ ಮಾಹಿತಿ ದೊರಕಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗುವುದು. ತನಿಖೆ ಬಳಿಕ ನಿಖರವಾಗಿ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.