Sunday, April 20, 2025
Google search engine

Homeಅಪರಾಧನವಿಲು ಸಾಂಬರ್ ಮಾಡಿದ ಯೂಟ್ಯೂಬರ್ ಬಂಧನ

ನವಿಲು ಸಾಂಬರ್ ಮಾಡಿದ ಯೂಟ್ಯೂಬರ್ ಬಂಧನ

ತೆಲಂಗಾಣ: ಸಾಂಪ್ರದಾಯಿಕ ರೀತಿಯಲ್ಲಿ ನವಿಲು ಸಾಂಬಾರ್ ಮಾಡುವುದು ಹೇಗೆ ಎಂಬ ಪಾಕವಿಧಾನವನ್ನು ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಯೂಟ್ಯೂಬರ್ ಓರ್ವನನ್ನು ಬಂಧಿಸಲಾಗಿದೆ.

ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲ ನಿವಾಸಿಯಾಗಿರುವ ಪ್ರಣಯ್ ಯೂಟ್ಯೂಬರ್ ಈ ವಿಡಿಯೋ ವೈರಲ್ ಆಗಿದ್ದುಈ ವಿಡಿಯೋ ನೋಡಿದ ನೆಟ್ಟಿಗರು ಕೋಡಂ ಪ್ರಣಯ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಡಿಯೋದ ಥಂಬ್‌ನೈಲ್‌ನಲ್ಲಿ ನವಿಲು ಚಿತ್ರವನ್ನು ಹಾಕಿ ಅಪ್‌ಲೋಡ್ ಮಾಡಿದ್ದ.

ಯಾವಾಗ ಭಾರಿ ವಿರೋಧ ವ್ಯಕ್ತವಾಗಿದೆ ಎಂಬ ಗೊತ್ತಾಯಿತೋ ತಕ್ಷಣ ವಿಡಿಯೋವನ್ನು ಯೂಟ್ಯೂಬ್‌ನಿಂದ ಪ್ರಣಯ್ ಡಿಲೀಟ್ ಮಾಡಿದ್ದಾರೆ. ಆದರೆ ಈ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದೆ. ಇದೀಗ ಪ್ರಣಯ್ ನನ್ನು ವಶಕ್ಕೆ ಪಡೆದು ಆತನಿಂದ ನವಿಲು ಗರಿ ಹಾಗೂ ಸಾಂಬರ್ ಅನ್ನು ವಶಪಡಿಸಿಕೊಂಡಿದ್ದಾರೆ. ಒಂದು ವೇಳೆ ಅದು ನವಿಲು ಖಾದ್ಯ ಎಂಬುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular