ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕರಾಗಿ ಅಧಿಕಾರವನ್ನು ಸೋಮವಾರ ವೈ.ಎಸ್.ಲೋಕೇಶ್ ವಹಿಸಿ ಕೊಂಡರು. ಈವರೆಗೆ ಇದ್ದ ಅಬಕಾರಿ ನಿರೀಕ್ಷಕಿ ಶೈಲಜ ಅವರನ್ನು ಅಬಕಾರಿ ಸಂಚಾರ ದಳದ ನಿರೀಕ್ಷಕಿ ಆಗಿ ವರ್ಗಾವಣೆ ಮಾಡಲಾಗಿದೆ.
ಪಟ್ಟಣದ ಅಬಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆಕ್ರಮ ಮಧ್ಯ ಮಾರಾಟ ಮತ್ತು ಮಾದಕ ವಸ್ತುಗಳ ಮಾರಾಟ, ಗಾಂಜ ಮಾರಾಟ ಕಂಡು ಬಂದಲ್ಲಿ ತಕ್ಷಣ ನಮ್ಮ ಇಲಾಖೆ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನ ನಾಗರೀಕರ ಹಿತ ದೃಷ್ಟಿಯಿಂದ ಕಾನೂನು ಬಾಹಿರವಾಗಿ ನಡೆಯುವ ಆಕ್ರಮವಾಗಿ ಮದ್ಯ,ಗಾಂಜ, ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ ಅವರು ನಾಗರೀಕರು, ಸಾರ್ವಜನಿಕರು ಸಹಕಾರ ನೀಡ ಬೇಕು ಎಂದರು.
ಇದೇ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ವೈ.ಎಸ್.ಲೋಕೇಶ್ ಅವರನ್ನು ಕಾಂಗ್ರೆಸ್ ಪಕ್ಷರ ತಾಲೂಕು ಎಸ್‌ಟಿ ಘಟಕದ ತಿಪ್ಪೂರು ಮಹದೇವ ಅಭಿನಂದಿಸಿದರು. ಕಾಂಗ್ರೆಸ್ ರಾಜ್ಯ ಎಸ್‌ಟಿ ಘಟಕದ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ಮುಂಜನಹಳ್ಳಿ ಮಹದೇವನಾಯಕ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್.ಮಹದೇವ, ಎಂಎಸ್‌ಎಸ್ ತಾಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸೇವಾಧಳದ ಅಧ್ಯಕ್ಷ ಬಿ.ಹೆಚ್.ಕುಮಾರ್ ಇದ್ದರು.