ಮೈಸೂರು: ರೂಪ ನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೋಗಾದಿಯ ರೂಪ ನಗರದಲ್ಲಿರುವ ಬಡಾವಣೆ ನಿವಾಸಿಗಳು ಉದ್ಯಾನವನ ಅಭಿವೃದ್ಧಿಗಾಗಿ ತಮ್ಮ ಉಳಿಸಿದ ಹಣದಿಂದ, ಸುಮಾರು 250 ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಮಕ್ಕಳ ಆಟಿಕೆ, ಮತ್ತು ಟೆನ್ನಿಸ್ ಬಾಲ್ ಮತ್ತು ವಾಲಿಬಾಲ್ ಕೋರ್ಟ್ ನ್ನು ನಿರ್ಮಿಸಿದ್ದಾರೆ.
ಸದರಿ ಟೆನ್ನಿಸ್ ಬಾಲ್ ಮತ್ತು ವಾಲಿಬಾಲ್ ಕೋರ್ಟ್ ನ್ನು ಗಿಡ ನೆಡುವ ಮೂಲಕ ಜಿಲ್ಲಾ ಪಂಚಾಯತ್ ಸಿಇಒ ಗಾಯಿತ್ರಿ ಕೆ ಎಂ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಹಾಗೂ ಉದ್ಯಾನವನವನ್ನು ತಮ್ಮ ಮನೆಯಂತೆ ಸ್ವಚ್ಛತೆಯಿಂದ ಕಾಪಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ,
ನಮ್ಮ ವನ ಎಂಬ ಹೆಸರಿನಲ್ಲಿ ಗಿಡಗಳನ್ನು ನೆಟ್ಟಿ ಪೋಷಿಸುತ್ತಿರುವ ರೂಪ ನಗರ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ವಿಶೇಷ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸ್ಥಳೀಯ ನಿವಾಸಿಗಳಾದ ಸದಾಶಿವ ಪೂಜಾರಿ, ಬಾಲಕೃಷ್ಣ, ಅಧ್ಯಕ್ಷರಾದ ಉದಯ್ ಶಂಕರ್, ಉಪಾಧ್ಯಕ್ಷರಾದ, ಉಮಾ ಪೇಶ್ವ , ಸೋಮಯ್ಯ ಜಿ, ಶ್ರೀಧರ್ ತಂತ್ರಿ, ಸಾಧನಾ ತಂತ್ರಿ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಡಿ, ರ್ಯನಾರಾಯಣ, ಪ್ರಿಯಾ, ಮಾಯ, ಲಲಿತಾ, ಹಾಗೂ ಇನ್ನಿತರ ಸ್ಥಳೀಯ ನಿವಾಸಿಗಳು ಹಾಜರಿದ್ದರು.