Monday, June 15, 2026
Google search engine

Homeಸ್ಥಳೀಯಮೈಸೂರಿನ ಹೋಟೆಲ್ ಅಗ್ನಿ ಅವಘಡದಲ್ಲಿ 7 ಮಂದಿಗೆ ಗಂಭೀರ ಗಾಯ : ದಟ್ಟ ಹೊಗೆಯಿಂದ ಆತಂಕ...

ಮೈಸೂರಿನ ಹೋಟೆಲ್ ಅಗ್ನಿ ಅವಘಡದಲ್ಲಿ 7 ಮಂದಿಗೆ ಗಂಭೀರ ಗಾಯ : ದಟ್ಟ ಹೊಗೆಯಿಂದ ಆತಂಕ : ಮೇಲಂತಸ್ತಿನಿಂದ ಜಿಗಿದ ಗ್ರಾಹಕರು

ಮೈಸೂರು :  ಬಾರ್ ಅಂಡ್ ರೆಸ್ಟೋರೆಂಟ್ ಹೋಟೆಲ್ ನಲ್ಲಿ ಶಾರ್ಟ್ ಸರ್ಕ್ಯೂಟ್  ನಿಂದ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿ 7 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ದಟ್ಟಗಳ್ಳಿ ನೇತಾಜಿ ವೃತ್ತದ ಬಳಿ ಇರುವ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್‌ ನಲ್ಲಿ ಈ ಘಟನೆ ನಡೆದಿದೆ. ಸಾಹಿಲ್ ಮತ್ತು ಪ್ರಕಾಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. 7 ಜನರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಸುಯೋಗ ಹಾಗೂ ಅಪೋಲೋ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ.

ಹೋಟೆಲ್ ನಲ್ಲಿ 25 ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಫೈರ್ ಇಂಜಿನ್ ತಂಡದಿಂದ 7 ಜನರ ರಕ್ಷಣೆ ಮಾಡಲಾಗಿದೆ.  ಅಗ್ನಿ ಅವಘಡದ ವೇಳೆ  ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಆತಂಕಗೊಂಡ ಕೆಲವರು ಮೇಲಂತಸ್ತಿನಿಂದ ಜಿಗಿದು ಪಾರಾಗಲು ಯತ್ನಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular