ಗಲ್ಫ್ ಯುದ್ಧ ಭೀತಿಯಿಂದ ಸ್ಥಗಿತಗೊಂಡಿದ್ದ ವಿಮಾನ ಯಾನದ ಪೈಕಿ ಏರ್ ಇಂಡಿಯಾ ಮಂಗಳೂರು- ಶಾರ್ಜಾ ಮಧ್ಯೆ ಮಾ.16ರಿಂದ 28ರವರೆಗೆ ಪ್ರತಿದಿನ ವಿಮಾನ ಸಂಚಾರ ಆರಂಭಿಸಲಿದೆ.
ಏರ್ ಇಂಡಿಯಾ 6057 ಮಂಗಳೂರಿನಿಂದ ಮಧ್ಯಾಹ್ನ 1:25ಕ್ಕೆ ಹೊರಟು ಶಾರ್ಜಾವನ್ನು ಅಲ್ಲಿನ ಸಮಯ ಸಂಜೆ 4:05ಕ್ಕೆ ತಲುಪಲಿದೆ. ಏರ್ ಇಂಡಿಯಾ 6058 ಶಾರ್ಜಾದಿಂದ ಅಲ್ಲಿನ ಸಮಯ ಸಂಜೆ 5:05 ಕ್ಕೆ ಹೊರಟು ರಾತ್ರಿ 10.30ಕ್ಕೆ ಮಂಗಳೂರು ತಲುಪಲಿದೆ.
ಮಂಗಳೂರಿನಿಂದ ದುಬೈಗೆ ವಾರದಲ್ಲಿ 17, ಅಬುಧಾಬಿಗೆ 14, ದೋಹಾಕ್ಕೆ 3, ಜೆದ್ದಾಕ್ಕೆ 3, ಮಸ್ಕತ್‌ಗೆ 2, ಬಹರೈನ್‌ಗೆ 4, ಕುವೈತ್‌ಗೆ 3, ದಮ್ಮಾಮ್‌ಗೆ 6 ವಿಮಾನಗಳು ಸಂಚರಿಸುತ್ತವೆ. ಆದರೆ ಗಲ್ಫ್ ಯುದ್ಧ ಭೀತಿಯಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಬಹುತೇಕ ಎಲ್ಲ ವಿಮಾನಗಳ ಸಂಚಾರ ರದ್ದಾಗಿದೆ.
ವರದಿ: ಶಂಶೀರ್ ಬುಡೋಳಿ



