Saturday, March 14, 2026
Google search engine

Homeರಾಜ್ಯಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಶ್ಲಾಘನೀಯ: ನ್ಯಾಯಾಧೀಶ ಬಸವರಾಜ ತಳವಾರ

ಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಶ್ಲಾಘನೀಯ: ನ್ಯಾಯಾಧೀಶ ಬಸವರಾಜ ತಳವಾರ

ಗುಂಡ್ಲುಪೇಟೆ : ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಾಧನೆ ಮಾಡಿದ್ದಾರೆ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಶ್ಲಾಘಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆ ತಾಯಿ, ಮಗಳು, ಅಕ್ಕ-ತಂಗಿ, ಗೆಳತಿ, ಹೆಂಡತಿಯಾಗಿ ಸರ್ವರಿಗೂ ಒಳಿತು ಬಯಸುತ್ತ ಸಂಸಾರ ನೌಕೆಯನ್ನು ಉತ್ತಮವಾಗಿ ಸಾಗಿತ್ತಿದ್ದಾರೆ. ಮಹಿಳೆಯನ್ನು ದೇವತೆಗಳಿಗೆ ಹೋಲಿಕೆ ಮಾಡಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂಬ ಉದ್ಧೇಶದಿಂದ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಕಾನೂನಿನಲ್ಲಿ ಸಿಗುವ ಸ್ಥಾನಮಾನ, ಮಹಿಳೆಯರ ಶೋಷಣೆ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಅಲ್ಲದೆ ಪುರುಷರಂತೆ ಮಹಿಳೆಯರೂ ಇರಬೇಕು ಎಂಬ ಉದ್ದೇಶ ಸಂವಿಧಾನ ವಿಶೇಷ ಸ್ಥಾನಮಾನ ಕೊಟ್ಟಿದೆ. ಎಲ್ಲಾ ರಂಗದಲ್ಲಿಯೂ ಇಂದು ತಮ್ಮ ಛಾಪು ಮೂಡಿಸಿದ್ದು, ಮಹಿಳೆಯರಿಗೆ ಕಾನೂನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೀಪು.ಎಂ.ಡಿ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಗಿರೀಶ್.ಆರ್.ಬಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಸ್.ವೆಂಟಕೇಶ್, ಸಹಾಯಕ ಸರ್ಕಾರಿ ಅಭಿಯೋಜಕ ರೇವಣ್ಣ, ಶಿವನಂಜಪ್ಪ, ಉಪಾರಾಣಿ, ಕಾರ್ಯದರ್ಶಿ ಜವರಾಜು , ವಕೀಲರು ಹಾಜರಿದ್ದರು.

RELATED ARTICLES
- Advertisment -
Google search engine

Most Popular