ಹಾರ್ಮುಝ್ ಜಲಸಂಧಿಯ ಮೂಲಕ ಒಟ್ಟು 46,000 ಎಂಟಿ ಪ್ರಮಾಣದೊಂದಿಗೆ ಎಲ್ಪಿಜಿ ಹಡಗು ಶಿವಾಲಿಕ್ ಗುಜರಾತ್ನ ಮುಂದ್ರಾ ಬಂದರಿನ ಎಲ್ಪಿಜಿ ಟರ್ಮಿನಲ್ಗೆ ಆಗಮಿಸಿದೆ.
46,000 ಎಂಟಿ ಪ್ರಮಾಣ ಎಲ್ಪಿಜಿಯನ್ನು ಹಡಗು ಹೊತ್ತಿದೆ. ಈ ಪೈಕಿ 20,000 ಎಂಟಿಯಷ್ಟು ಗ್ಯಾಸ್ನ್ನು ಭಾರತದ ಅತಿದೊಡ್ಡ ಖಾಸಗಿ ಮತ್ತು ವಾಣಿಜ್ಯ ಬಂದರು ಮುಂದ್ರಾದಲ್ಲಿ ಒಟ್ಟು ಇಳಿಸಲಾಗುತ್ತದೆ ಹಾಗೂ 26,000 ಎಂಟಿ ಗ್ಯಾಸ್ನ್ನು ನವ ಮಂಗಳೂರು ಬಂದರಿನ ಸಿಂಗಲ್ ಪಾಯಿಂಟ್ ಮೂರಿಂಗ್ ಸೌಲಭ್ಯದಲ್ಲಿ ಇಳಿಸಲಾಗುವುದು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಬುಕ್ ಮಾಡಿರುವ ಎಲ್ಪಿಜಿಯನ್ನು ಹಡಗು ಸಾಗಿಸುತ್ತಿದೆ.



