ಭೂ ವ್ಯವಹಾರದಲ್ಲಿ ಮೋಸ ಮಾಡಿದ ಸಿಟ್ಟಿನಿಂದ ಯುವಕನೋರ್ವ ಸ್ಕೂಟರ್ ಗೆ ಕಾರನ್ನು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರನ್ನು ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.
ಕಾರು ಡಿಕ್ಕಿಯಿಂದ ಗಾಯಗೊಂಡ ಮೋಹನ್ ದಾಸ್ ಶೆಟ್ಟಿ ಎಂಬುವವರಿಗೆ ಆರೋಪಿತನಾದ ಮಹಮ್ಮದ್ ಶರೀಫ್ ಮತ್ತು ಆತನ ತಂದೆ ಮಹಮ್ಮದ್ ಇಕ್ಬಾಲ್ ಮಧ್ಯೆ ಭೂ ವ್ಯವಹಾರವಿದೆ. ಸುರತ್ಕಲ್ ನ ಖಾನ ಮತ್ತು ವಾಮಂಜೂರಲ್ಲಿ ಆರೋಪಿತನು ಸುಮಾರು 2 ಕೋಟಿ ಹಣವನ್ನು ಹೂಡಿಕೆ ಮಾಡಿದ್ದ. ಇದರಲ್ಲಿ ಮೋಹನ್ ದಾಸ್ ಶೆಟ್ಟಿಯು ಆರೋಪಿತನಿಗೆ ಮೋಸ ಮಾಡಿದ ಸಿಟ್ಟಿನಿಂದ ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಮಾತುಕತೆ ನಡೆಸಿ, ಮೋಹನ್ ರ ಮೊಬೈಲನ್ನು ಕಸಿದುಕೊಂಡಿದ್ದ. ನಂತರ ದೂರುದಾರರು ತನ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿತನು ಸಿಟ್ಟಿನಿಂದ ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಮೋಹನ್‌ರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಗುದ್ದಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ತನಿಖೆ ನಡೆಸಿದ ಪೊಲೀಸರು ಆರೋಪಿತನಾದ ಮಹಮ್ಮದ್ ಶರೀಫ್ ಎಂಬಾತನನ್ನು ಪತ್ತೆಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಭೂ ವ್ಯವಹಾರದಲ್ಲಿ ಮೋಸದ ಸಿಟ್ಟು: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದು ಕೊಲೆಗೆ ಯತ್ನ
RELATED ARTICLES



