Thursday, March 19, 2026
Google search engine

Homeಅಪರಾಧಉಜಿರೆಯಲ್ಲಿ ಜಾತ್ರೆಗೆ ಹೋದ ಅಪ್ರಾಪ್ತನಿಗೆ ಹಲ್ಲೆ: ಕೇಸ್ ದಾಖಲು

ಉಜಿರೆಯಲ್ಲಿ ಜಾತ್ರೆಗೆ ಹೋದ ಅಪ್ರಾಪ್ತನಿಗೆ ಹಲ್ಲೆ: ಕೇಸ್ ದಾಖಲು

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ಪ್ರಾಯದ (17 ವರ್ಷ)ಬಾಲಕನು, ದಿನಾಂಕ: 11.03.2026ರಂದು ಸಂಜೆ, ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿರುತ್ತಾನೆ. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿರುತ್ತಾರೆ ಹಾಗೂ ಸದ್ರಿ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ. ಈ ಘಟನೆಯಿಂದ ಬಾಲಕನು ಕೆಲದಿನಗಳಿಂದ ಭಯಭೀತನಾಗಿರುತ್ತಾನೆ ಎಂಬುದಾಗಿ ಬಾಲಕನ ತಂದೆ ದಿನಾಂಕ: 18.03.2026 ರಂದು ತಡವಾಗಿ ಬಂದು ದೂರು ನೀಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ‌ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026, ಕಲಂ: 137(2), 115(2), 351(2) , 352, 353(2) ಜೊತೆಗೆ 190 ಬಿಎನ್‌ ಎಸ್‌ 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.

RELATED ARTICLES
- Advertisment -
Google search engine

Most Popular