Friday, March 20, 2026
Google search engine

Homeಸ್ಥಳೀಯಕೋಗಿಲೂರು ಗ್ರಾಮದಲ್ಲಿ ಯುಗಾದಿ ಹಬ್ಬದ ವೈಭವ : ಭಕ್ತಿ-ಭಾವದಿಂದ ಕಂಗೊಳಿಸಿದ ಯುಗಾದಿ ಉತ್ಸವ

ಕೋಗಿಲೂರು ಗ್ರಾಮದಲ್ಲಿ ಯುಗಾದಿ ಹಬ್ಬದ ವೈಭವ : ಭಕ್ತಿ-ಭಾವದಿಂದ ಕಂಗೊಳಿಸಿದ ಯುಗಾದಿ ಉತ್ಸವ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕೋಗಿಲೂರು ಗ್ರಾಮದಲ್ಲಿ ವೀರಭದ್ರಶ್ವರ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿಯ ಹಬ್ಬದ ಕಾರ್ಯಕ್ರಮ ಬಾರಿ ವಿಜೃಂಣೆಯಿಂದ ನಡೆಯಿತು.
ಯುಗಾದಿ ಹಬ್ಬದ ಪ್ರಯುಕ್ತ ಈ ದೇವರುಗಳ ಉತ್ಸವ ಮೂರ್ತಿಗಳನ್ನು ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಿ ನಂತರ ಗ್ರಾಮಕ್ಕೆ ತರಲಾಯಿತು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ ಮತ್ತು ಜಯಕಾರದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೇರವಣಿಗೆ ಮಾಡಿದಾಗ ಗ್ರಾಮಸ್ಥರು ದೇವರುಗಳಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಯಜಮಾನ್ರು ಗಳಾದ ಕೆ. ಟಿ. ರಾಜಣ್ಣ ,ಕೆ. ಎಂ .ರಮೇಶ್, ರಾಘವೇಂದ್ರ ಅರಸ್, ರುದ್ರಯ್ಯ, ರವೀಶ್, ಕರಿಗೌಡರು, ನಾಗರಾಜು, ಯೋಗಾನಂದ, ವೆಂಕಟೇಶ್, ಪುಟ್ಟರಾಜು, ಅನುರಾಜು,ಸುರೇಶ, ರಾಘವೇಂದ್ರ, ಹಳ್ಳಿಮೇಸ್ಟ್ರು ಭಾಸ್ಕರ್ ,ಕೋಗಿಲೂರು ಗ್ರಾಮ ಸೇವಕ ಶಶಿಕುಮಾರ್ ಎಲ್ಲಾ ಗ್ರಾಮಸ್ಥರು ಹಾಜರಿದ್ದರು.

RELATED ARTICLES
- Advertisment -
Google search engine

Most Popular