Saturday, April 4, 2026
Google search engine

Homeಸ್ಥಳೀಯಶಾಸಕರ ಪಿಎಗಳು ಐಪಿಎಲ್ ಟಿಕೆಟ್‌ಗೆ ಸಾಲು : ಸದಾನಂದ ಗೌಡ ಕಿಡಿ

ಶಾಸಕರ ಪಿಎಗಳು ಐಪಿಎಲ್ ಟಿಕೆಟ್‌ಗೆ ಸಾಲು : ಸದಾನಂದ ಗೌಡ ಕಿಡಿ

ಬೆಂಗಳೂರು :  ನಾಳೆ ನಡೆಯಲಿರುವ ಐಪಿಎಲ್  ಆರ್ ಸಿಬಿ ವರ್ಸಸ್ ಸಿಎಸ್ ಕೆ ಪಂದ್ಯಕ್ಕೆ ಶಾಸಕರಿಗೆ ಮೀಸಲಿಟ್ಟಿರುವ ಮೂರು ಟಿಕೆಟ್ ಗಳನ್ನ ಪಡೆಯಲು ಶಾಸಕರ ಪಿಎಗಳು ವಿಧಾನಸೌಧದಲ್ಲಿ ಸರತಿ ಸಾಲಿನಲ್ಲಿ ನಿಂತ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಕಿಡಿಕರಿದ್ದಾರೆ.

ಈ ಕುರಿತು ಮಾತನಾಡಿದ ಡಿ.ವಿ ಸದಾನಂದಗೌಡ, ಶಾಸಕರ  ಫ್ರಿ ಟಿಕೆಟ್ ಪಡೆಯಲು ವಿಧಾನಸೌಧದಲ್ಲಿ ಶಾಸಕರ ಪಿಎಗಳು ಸಾಲು ನಿಂತಿದಾರೆ. ಐಪಿಎಲ್ ಟಿಕೆಟ್ ಗೆ ಭಿಕ್ಷೆ ಬೇಡುತ್ತಾರಲ್ಲ ಇವರಿಗೆ ನಾಚಿಕೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11ಜನ ಬಲಿಯಾದರು.  ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದರೆ ಒಂದು ಗೌರವವಿರುತಿತ್ತು. ಆದರೆ ನೂರಾರುಕೋಟಿ ಸುರಿದು ಶಾಸಕರಾದವರು ಐಪಿಎಲ್ ಟಿಕೆಟ್ ಭಿಕ್ಷೆ ಬೇಡುತ್ತಾರಲ್ಲ ನಾಚಿಕೆಯಾಗಬೇಕು.  ಯಾವುದೇ ಜನಪ್ರತಿನಿಧಿಗಳು ಹೀಗೆ ಮಾಡಬಾರದು. ಕ್ಷೇತ್ರಕ್ಕೆ ಸಹಕಾರ ಬೇಕು ಅಂತಾ ಭಿಕ್ಷೆ ಬೇಡಿ ಎಂದು ಡಿವಿ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular