ಮೈಸೂರು : ಭೂ ಸುರಕ್ಷಾ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿ ಮೈಸೂರು ಅತ್ಯುತ್ತಮ ಸಾಧನೆ ಮಾಡಿದೆ. ತಹಸೀಲ್ದಾರ್ ಅಪ್ರೂವಲ್ ಮಾಡುವ ದಾಖಲೀಕರಣದಲ್ಲಿ 3 ನೇ ಸ್ಥಾನ, ಶಿರಸ್ತೇದಾರರು ಮಾನ್ಯಗೊಳಿಸುವಲ್ಲಿ ಎಂಟನೇ ಸ್ಥಾನದಲ್ಲಿದೆ. ಮುಂದಿನ ಆರು ತಿಂಗಳಲ್ಲಿ ನಂಜನಗೂಡು, ಹುಣಸೂರು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ತಾಲೂಕಿನ ಜಮೀನು ದಾಖಲೆಗಳ ಕಡತಗಳ ದಾಖಲೀಕರಣ ಪೂರ್ಣಗೊಳ್ಳಲಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ದಾಖಲೆಗಳ ವಿತರಣೆ ಆರಂಭವಾಗಿದೆ. ರೆಕಾರ್ಡ್ ರೂಂನಲ್ಲಿನಾಲ್ಕು ಮಾದರಿ ವಿಭಾಗಗಳಿರುತ್ತವೆ.
ಭೂ ಸುರಕ್ಷಾ ಯೋಜನೆ – ಇವುಗಳಲ್ಲಿ ಎ ವಿಭಾಗದ ದಾಖಲೆಗಳನ್ನು ಶಾಶ್ವತವಾಗಿ, ಬಿ-30 ವರ್ಷ, ಸಿ-10, ಡಿ-5 ವರ್ಷಗಳವರೆಗೆ ಸಂರಕ್ಷಿಸಿಡಬೇಕು. ಸರಕಾರ ಭೂ ಸುರಕ್ಷಾ ಯೋಜನೆಯಡಿಯಲ್ಲಿ ಮುಖ್ಯವಾಗಿ ಎ ಮತ್ತು ಬಿ ವರ್ಗದ ದಾಖಲೆಗಳನ್ನು(ಕಡತ, ವಹಿಗಳು) ಡಿಜಿಟಲೀಕರಣಗೊಳಿಸುವ ಕಾರ್ಯ ಹಮ್ಮಿಕೊಂಡಿದೆ. ಇವುಗಳಿಗೆ ತಹಸೀಲ್ದಾರ್ ಹಾಗೂ ಶಿರಸ್ತೇದಾರ್ ಅನುಮೋದನೆ ನೀಡುತ್ತಾರೆ. ಜಿಲ್ಲೆಯಲ್ಲಿ ಎ ಮತ್ತು ಬಿ ವರ್ಗಕ್ಕೆ ಸೇರಿದ ಒಟ್ಟು 12 ಲಕ್ಷ ಕಡತಗಳು ಮತ್ತು ವಹಿಗಳ 6.37 ಕೋಟಿ ಪುಟಗಳ ದಾಖಲೆಗಳಿವೆ.
ಇವುಗಳಲ್ಲಿ 3.6 ಕೋಟಿ ಪುಟಗಳನ್ನು ಅಪ್‌ಲೋಡ್ ಮಾಡಿ ಡಿಜಿಟಲ್ ದಾಖಲೀಕರಣ ಗೊಳಿಸಲಾಗಿದೆ. 2.7 ಕೋಟಿ ಪುಟಗಳು ಬಾಕಿ ಉಳಿದಿವೆ. ಮೈಸೂರು (ಶೇ.93), ಕೆ.ಆರ್. ನಗರ(ಶೇ.92)ತಾಲೂಕಿನ ದಾಖಲೀಕರಣ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಮುಂದಿನ ಆರು ತಿಂಗಳಲ್ಲಿ ನಂಜನಗೂಡು, ಹುಣಸೂರು ಹೊರತುಪಡಿಸಿ ಇಡೀ ಜಿಲ್ಲೆಯ ದಾಖಲೆಗಳ ಡಿಜಟಲೀಕರಣ ಪೂರ್ಣಗೊಳ್ಳಲಿದೆ.
ಈಗಾಗಲೇ ಆನ್‌ಲೈನ್ ಮುಖಾಂತರ ದಾಖಲೆಗಳನ್ನು ವಿತರಿಸಲಾಗುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ 1.64 ಲಕ್ಷ ಪುಟಗಳನ್ನು ನೀಡಲಾಗಿದೆ. ವಿಶೇಷ ವೆಂದರೆ ನಾಗರಿಕರು ಈವರೆಗೆ ತಾಲೂಕು ಕಚೇರಿಯಲ್ಲಿ ಪಡೆಯುತ್ತಿದ್ದ ದಾಖಲೆಗಳನ್ನು ಇನ್ನು ಮುಂದೆ ನಾಡ ಕಚೇರಿಯಲ್ಲಿಯೇ ಪಡೆದುಕೊಳ್ಳಬಹುದು.
ದಾಖಲೆ ಪಡೆಯುವುದು ಹೇಗೆ? – ನಾಗರಿಕರು ಭೂ ಸುರಕ್ಷಾ ಸೇವಾ ವಿತರಣೆ-ಸ್ವಯಂ ಸೇವಾ ಪೋರ್ಟಲ್‌ನ ವೆಬ್‌ಸೈಟ್‌ಗೆ ಹೋಗಿ ಮೊಬೈಲ್ ಸಂಖ್ಯೆ ಯೊಂದಿಗೆ ಲಾಗಿನ್ ಮಾಡಬೇಕು. ನಂತರ ಮೂಲ ಅರ್ಜಿದಾರರ ವಿವರ ನಮೂದಿಸಬೇಕು. ಅಗತ್ಯ ಡಾಕ್ಯು ಮೆಂಟ್ ಹುಡುಕಿದ ಬಳಿಕ ಬೇಕಾದ ಪುಟಗಳನ್ನು ಆಯ್ಕೆ ಮಾಡಿಕೊಂಡು ಆನ್‌ಲೈನ್‌ನಲ್ಲೇ ಹಣ ಪಾವತಿಸಿ ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.



