ರಾಮನಗರ : ಡಿಕೆ ಶಿವಕುಮಾರ್ ಗೆ ಅಧಿಖಾರ ಸಿಗುತ್ತೆ ಎಂಬ ಆಸೆ ಅಭಿಲಾಷೆ ಇದೆ. ಅಧಿಕಾರ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ಮೇ 15ರೊಳಗೆ ಸಿಎಂ ಸ್ಥಾನ ಸಿಗುತ್ತೆ ಎಂಬ ಅಭಿಲಾಷೆ ಇಟ್ಟುಕೊಂಡಿದ್ದೇವೆ. ನಮಗೆ ಹಾಗೂ ನಮ್ಮ ನಾಯಕರಿಗೆ ಶಕ್ತಿ ಕೊಡುವುದು ಭಗವಂತ. ನಮಗೆ ಆಶೀರ್ವಾದ ಮಾಡಿ ಭಗವಂತ ಶಕ್ತಿ ಕೊಟ್ಟಿದ್ದಾನೆ. ರಾಜ್ಯದಲ್ಲಿ ಬದಲಾವಣೆ ಬೇಕು ಎಂದು ಜನರು ಬಯಸುತ್ತಿದ್ದಾರೆ. ಅದರಲ್ಲಿ ನಾನೂ ಕೂಡ ಮೊದಲಿಗನು ಎಂದರು.
ನಮ್ಮ ನಾಯಕರಿಗೆ ಅಧಿಕಾರ ಸಿಗುತ್ತೆ ಎಂದು ನಂಬಿಕೆ ಇಟ್ಟಿದ್ದೇನೆ. ಕಾಲ ಬೇಗ ಕೂಡಿ ಬರುತ್ತಿದೆ. ಡಿಕೆ ಶಿವಕುಮಾರ್ ಗೆ ಅಧಿಕಾರ ಸಿಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ನಾನು ಸೇರಿದಂತೆ ಸಾಕಷ್ಟು ಶಾಸಕರು ಇದನ್ನೇ ಬಯಸುತ್ತಿದ್ದೇವೆ. ಅಧಿಕಾರ ಹಂಚಿಕೆ ಒಪ್ಪಂದ ವಿಚಾರವಾಗಿ ನಾಯಕರು ಹೇಳಿದ್ದಾರೆ. ಯಾರು ಒಪ್ಪಂದಕ್ಕೆ ಕುಳಿತಿದ್ದರು. ಯಾರು ಒಪ್ಪಂದ ಮಾಡಿಕೊಂಡರು ಎಲ್ಲವೂ ನಮ್ಮ ನಾಯಕರೇ ಹೇಳಿದ್ದಾರೆ ಮೇ 15 ರೊಳಗೆ ಎಲ್ಲವೂ ಗೊತ್ತಾಗಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.



