Friday, May 1, 2026
Google search engine

Homeಸಿನಿಮಾಬಾಕ್ಸ್​ ಆಫಿಸ್​ನಲ್ಲಿ ಅಬ್ಬರಿಸಿದ ಧ್ರುವ: ಮೊದಲ ದಿನ ಕೆಡಿ ಗಳಿಸಿದ್ದೆಷ್ಟು..?

ಬಾಕ್ಸ್​ ಆಫಿಸ್​ನಲ್ಲಿ ಅಬ್ಬರಿಸಿದ ಧ್ರುವ: ಮೊದಲ ದಿನ ಕೆಡಿ ಗಳಿಸಿದ್ದೆಷ್ಟು..?

ನಿನ್ನೆ ( ಏಪ್ರಿಲ್ 30 ) ನಿರ್ದೇಶಕ ಪ್ರೇಮ್ ನಿರ್ದೇಶನದ ಮತ್ತು ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಡಿ ದಿ ಡೆವಿಲ್ ಬಿಡುಗಡೆಯಾಗಿದೆ. ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಹೊರಬಂದ ಸಿನಿ ರಸಿಕರು ಚಿತ್ರದ ಬಗ್ಗೆ ಪಾಸಿಟಿವ್​ ರಿವೀವ್​ ನೀಡಿದ್ದಾರೆ.

ಹಲವು ದಿನಗಳ ಬಳಿಕ ನಿರ್ದೇಶಕ ಪ್ರೇಮ್ ತಮ್ಮ ಶೈಲಿಯ ಚಿತ್ರ ಮಾಡಿ ಗೆದ್ದಿದ್ದಾರೆ ಎಂಬ ಮಾತುಗಳು ಹಲವರ ಬಾಯಲ್ಲಿ ಕೇಳಿಬಂತು. ಇನ್ನು ನಟ ಧ್ರುವ ಸರ್ಜಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿನಿ ಪ್ರೇಕ್ಷಕರು, ಧ್ರುವ ಸರ್ಜಾಗೆ ಈ ಚಿತ್ರ ಬ್ರೇಕ್ ನೀಡಲಿದೆ ಎಂದು ಹಲವರು ಹೆಳಿದ್ದಾರೆ.

ಹೀಗೆ ದೊಡ್ಡ ಮಟ್ಟದಲ್ಲಿಯೇ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡ ಕೆಡಿ ದಿ ಡೆವಿಲ್ ಮೊದಲ ದಿನ ಎಷ್ಟು ಗಳಿಕೆ ಮಾಡಿದೆ ಎಂಬ ಪ್ರಶ್ನೆ ಸರ್ಜಾ ಅಭಿಮಾನಿ ವಲಯದಲ್ಲಿ ಮೂಡಿದೆ. ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಅಧಿಕೃತವಾಗಿ ಚಿತ್ರದ ಮೊದಲ ದಿನದ ಗಳಿಕೆಯನ್ನು ಘೋಷಣೆ ಮಾಡಿಲ್ಲ.

ಆದರೆ ಜನಪ್ರಿಯ ಬಾಕ್ಸ್ಆಫೀಸ್ ಕಲೆಕ್ಷನ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಕ್ ಕೆಡಿ ಚಿತ್ರದ ಮೊದಲ ದಿನದ ಗಳಿಕೆಯನ್ನು ಪ್ರಕಟಿಸಿದ್ದು, ಇದರ ಪ್ರಕಾರ ಕೆಡಿ ಮೊದಲ ದಿನ ದೇಶಾದ್ಯಂತ 4.10 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ.

ಇನ್ನು ಇಂದು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ರಜಾ ದಿನವಾದ್ದರಿಂದ ಮೊದಲ ದಿನಕ್ಕಿಂತ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆಯಿದೆ. ಜನರ ಬಾಯಿಂದ ಚಿತ್ರದ ಬಗ್ಗೆ ಒಳ್ಳೆಯ ರಿವ್ಯೂ ಬರುತ್ತಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

RELATED ARTICLES
- Advertisment -
Google search engine

Most Popular