Tuesday, May 5, 2026
Google search engine

Homeರಾಜಕೀಯಸಾಮಾಜಿಕ ನ್ಯಾಯಕ್ಕೆ ರಾಜಕೀಯ ಸ್ಥಾನ ಅಗತ್ಯ : ಡಾ.ಯತೀಂದ್ರ ಸಿದ್ದರಾಮಯ್ಯ

ಸಾಮಾಜಿಕ ನ್ಯಾಯಕ್ಕೆ ರಾಜಕೀಯ ಸ್ಥಾನ ಅಗತ್ಯ : ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಸಾಮಾಜಿಕ ನ್ಯಾಯದಂತೆ ರಾಜಕೀಯ ಅಧಿಕಾರ ದೊರೆಯಬೇಕಿದೆ ಎಂದು  ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ ನಲ್ಲಿ ನಡೆದ ಮೈಸೂರು,ಚಾಮರಾಜನಗರ, ಮಂಡ್ಯ,ಕೊಡಗು ಜಿಲ್ಲೆಗಳ ನಾಯಕ ಸಮಾಜದ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಮುಖಂಡರು ಎಸ್.ಸಿ.ಬಸವರಾಜು ಅವರಿಗೆ ಪರಿಷತ್ ಸದಸ್ಯ ಸ್ಥಾನಕ್ಕೆ ಪರಿಗಣಿಸಿ ಈ ಬಾರಿ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.

ಕಳೆದ 40 ವರ್ಷಗಳಿಂದ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ, ಸಮಾಜದ ಕೆಲಸ ಮಾಡಿಕೊಂಡು ಬಂದಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪರಿಗಣಿಸುವಂತೆ ಶೀಘ್ರದಲ್ಲೇ ಸಿಎಂ ಸೇರಿದಂತೆ ವರಿಷ್ಠರ ಬಳಿಗೆ ನಿಯೋಗ ಕರೆದೊಯ್ಯಲು ತೀರ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಮುಖಂಡ ಎಸ್.ಸಿ.ಬಸವರಾಜು ಅವರನ್ನು ಪರಿಷತ್ ಸದಸ್ಯರಾಗಿ ಮಾಡಬೇಕೆಂಬ ಬೇಡಿಕೆಗೆ ನಮ್ಮ ಸಹಮತವಿದೆ. ತಂದೆಯವರೊಂದಿಗೆ ನಿರಂತರವಾಗಿ ಹೆಜ್ಜೆ ಹಾಕುವ ಜೊತೆಗೆ ನನ್ನ ಚುನಾವಣೆಯಲ್ಲಿ ಗೆಲುವಿಗೆ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದು ಪರಿಷತ್‌ ಗೆ ಅವಕಾಶ ಕಲ್ಪಿಸುವಂತೆ ಒತ್ತಡ. ಹಾಕುತ್ತೇವೆ ಎಂದರು.

ಸಾವಾಜಿಕ ನ್ಯಾಯ ದೊರಕಬೇಕಾದರೆ ರಾಜಕೀಯ ಸ್ಥಾನವಾನ ದೊರೆಯಬೇಕು. ವಾಲ್ಮೀಕಿ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯುವಂತೆ ಒತ್ತಡ ಹೇರಲಾಗುವುದು. ಬಸವರಾಜು ಅವರಿಗೆ ಅವಕಾಶ ದೊರೆತರೆ ನಮಗೆ ಹೊರೆ ಕಡಿಮೆಯಾಗಲಿದೆ. ಕ್ಷೇತ್ರದ ಅನೇಕ ಸಮಸ್ಯೆಗಳನ್ನು ಅರಿತು ನಮ್ಮ ಗಮನಕ್ಕೆ ತರುತ್ತಾರೆ. ತಮ್ಮ ಹಂತದಲ್ಲೇ ಪರಿಹರಿಸುವುದಕ್ಕೆ ಆದ್ಯತೆ ನೀಡುವ ಕಾರಣ ಅವಕಾಶ ನೀಡಬೇಕು ಎಂದರು.

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕವಾದು, ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ  ಮಾಜಿ ಮಹಾಪೌರ ಆರಿಫ್ ಹುಸೇನ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ ಎ.ಆರ್.ಕೃಷ್ಣಮೂರ್ತಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ,ಕರ್ನಾಟಕ ಮೃಗಲಾಯಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಕಾಡಾ ಅಧ್ಯಕ್ಷ ರಂಗಸ್ವಾಮಿ, ವಾಜಿ ಶಾಸಕ ಕಳಲೆ ಕೇಶವಮೂರ್ತಿ, ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಮತ್ತಿತರರು ಹಾಜರಿದ್ದರು

ಸಾಮಾಜಿಕ ನ್ಯಾಯದಂತೆ ರಾಜಕೀಯ ಅಧಿಕಾರ ದೊರೆಯಬೇಕಿದೆ ಎಂದು  ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

RELATED ARTICLES
- Advertisment -
Google search engine

Most Popular