ಕೆ.ಆರ್.ನಗರ: ಅಖಿಲ ಭಾರತ ವೀರಶೈವ ಮಹಾಸಭಾದ ಸಾಲಿಗ್ರಾಮ ತಾಲೂಕು ಘಟಕದ ಅಧ್ಯಕ್ಷರಾಗಿ ಕೆಡಗ ನಟರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಸ್.ಸೋಮಶೇಖರ್ ಹೇಳಿದರು.

ಮಠದ ಆವರಣದಲ್ಲಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಅಧ್ಯಕ್ಷರ ಜತೆಗೆ 13 ಪುರುಷ ಮತ್ತು 7 ಮಂದಿ ಮಹಿಳಾ ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಮೇ.24 ರಂದು ಮಹಾ ಸಭಾದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿ ಮೇ.10 ರಂದು ನಾಮಪತ್ರಗಳನ್ನು ವಾಪಸ್ ಪಡೆಯಲು ದಿನಾಂಕ ಅವಕಾಶ ಕಲ್ಪಿಸಲಾಗಿತ್ತು ಆದರೆ ಅಧ್ಯಕ್ಷ ಸ್ಥಾನಕ್ಕೆ ಕೆಡಗ ನಟರಾಜು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವರು ಅವಿರೋಧವಾಗಿ ಚುನಾಯಿತರಾಗಿದ್ದಾರೆಂದು ಪ್ರಕಟಿಸಿದರು.
7 ಮಹಿಳಾ ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ಬಯಸಿ ಅಷ್ಟೇ ಮಂದಿ ಉಮೇದುವಾರಿಕೆ ಸಲ್ಲಿಸಿದ್ದರಿಂದ ದಾಕ್ಷಾಯಿಣಿ, ಬಿ.ಸಿ.ಕಾವ್ಯ, ರಾಣಿ, ಎಂ.ಎನ್.ರೇಖಾ, ಶಿಲ್ಪಾ, ಸುಂದ್ರಮ್ಮ ಆಯ್ಕೆಯಾಗಿದ್ದಾರೆಂದರು.
13 ಮಂದಿ ಪುರುಷ ನಿರ್ದೇಶಕ ಸ್ಥಾನಗಳಿಗೆ 14 ಮಂದಿ ನಾಮಪತ್ರ ಸಲ್ಲಿಸಿದ್ದರಾದರೂ ಉಮೇದುವಾರಿಕೆಗೆ ಅಂತಿಮ ದಿನವಾದ ಭಾನುವಾರ ಬಿ.ಎಲ್ ದಿನೇಶ್ ನಾಮಪತ್ರ ವಾಪಸ್ ಪಡೆದಿದ್ದರಿಂದ ಕೆ.ಬಿ.ಚಂದ್ರಶೇಖರ್, ಬಿ.ಪಿ.ಲೋಕೇಶ್, ಕುಪ್ಪೆಮಹೇಶ್, ಕರ್ತಾಳುನಟರಾಜು, ಮಂಜುನಾಥ್, ಎನ್.ಬಿ.ಸೋಮಶೇಖರ್, ಹೆಚ್.ಎಂ.ಸೋಮೇಶ್, ಬೀಚನಹಳ್ಳಿಶಿವಕುಮಾರ್, ತೇಜಮೂರ್ತಿ, ಉರಿಯಪ್ಪ, ಯೋಗಾನಂದ, ಎ.ಸಿ.ಯತೀಶ್, ನಟರಾಜು ಅವರುಗಳು ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆಂದು ಶ್ರೀಗಳು ಪ್ರಕಟಿಸಿದರು.
ಶ್ರೀಮಠದ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾ ಸಭಾದ ಕೆ.ಆರ್.ನಗರ ತಾಲೂಕು ಘಟಕದ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ನಿರ್ದೇಶಕ ಕುಪ್ಪೆಮಹದೇವಸ್ವಾಮಿ, ನಿಕಟಪೂರ್ವ ಉಪಾಧ್ಯಕ್ಷ ಬೇರ್ಯಪ್ರಕಾಶ್ ಮತ್ತು ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಹಾಜರಿದ್ದರು.
ಅಧ್ಯಕ್ಷ ಕೆಡಗ ನಟರಾಜು ಮಾತನಾಡಿ, ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಸಮಾಜದ ಮುಖಂಡರಿಗೆ ಕೃತಜತೆ ಸಲ್ಲಿಸಿ ಎಲ್ಲರ ಸಹಕಾರ ಮತ್ತು ಶ್ರೀಗಳು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.



