Thursday, May 14, 2026
Google search engine

Homeದೇಶಸಂಕಷ್ಟದ ನಡುವೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ : ಸಕ್ಕರೆ ರಫ್ತು ನಿಷೇಧ

ಸಂಕಷ್ಟದ ನಡುವೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ : ಸಕ್ಕರೆ ರಫ್ತು ನಿಷೇಧ

ನವದೆಹಲಿ : ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆಯನ್ನು ಸುಸ್ಥಿತಿಯಲ್ಲಿಡಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಸಕ್ಕರೆ ರಫ್ತಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಹೇರಿದೆ.

ಈ ರಫ್ತು ನಿಷೇಧವು ಸೆಪ್ಟೆಂಬರ್ 30, 2026 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ಯಾವ ಸಕ್ಕರೆಗೆ ಅನ್ವಯ? 

ಕಚ್ಚಾ ಸಕ್ಕರೆ (Raw Sugar), ಬಿಳಿ ಸಕ್ಕರೆ (White Sugar) ಮತ್ತು ಸಂಸ್ಕರಿಸಿದ ಸಕ್ಕರೆ (Refined Sugar) – ಈ ಮೂರೂ ವಿಧದ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಲಾಗಿದೆ.

ಪ್ರಮುಖ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಇಳುವರಿ ಕುಂಠಿತಗೊಂಡಿರುವುದರಿಂದ, ಸತತ ಎರಡನೇ ವರ್ಷವೂ ಸಕ್ಕರೆ ಉತ್ಪಾದನೆಯು ದೇಶದ ಬಳಕೆಯ ಪ್ರಮಾಣಕ್ಕಿಂತ ಕಡಿಮೆಯಾಗುವ ಆತಂಕವಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಯಾರಿಗೆ ವಿನಾಯಿತಿ ಇದೆ?

ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ರಫ್ತಿಗೆ ಅವಕಾಶ ನೀಡಲಾಗಿದೆ

EU ಮತ್ತು USA: CXL ಮತ್ತು TRQ ಕೋಟಾದ ಅಡಿಯಲ್ಲಿ ರಫ್ತು ಮಾಡಲು ಅನುಮತಿ ಇದೆ. ಇತರ ದೇಶಗಳ ಆಹಾರ ಭದ್ರತೆಯ ಅಗತ್ಯತೆಗಳಿಗಾಗಿ ಸರ್ಕಾರದಿಂದ ಸರ್ಕಾರಕ್ಕೆ (G2G) ನಡೆಯುವ ಒಪ್ಪಂದಗಳಿಗೆ ವಿನಾಯಿತಿ ನೀಡಲಾಗಿದೆ. ಈಗಾಗಲೇ ರಫ್ತು ಪ್ರಕ್ರಿಯೆಯಲ್ಲಿರುವ (In-transit) ಸರಕುಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ.

ಭಾರತವು ವಿಶ್ವದ ಅತಿದೊಡ್ಡ ಸಕ್ಕರೆ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಹಿಂದೆ ಹೆಚ್ಚುವರಿ ಉತ್ಪಾದನೆಯ ನಿರೀಕ್ಷೆಯಲ್ಲಿ 15 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿತ್ತು, ಆದರೆ ಬದಲಾದ ಸನ್ನಿವೇಶದಲ್ಲಿ ಈಗ ರಫ್ತಿಗೆ ಬ್ರೇಕ್ ಹಾಕಲಾಗಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular