Thursday, May 14, 2026
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸಿ.ಪಿ. ರಮೇಶ್ ಕುಮಾರ್ ಆಯ್ಕೆ

ಕೆ.ಆರ್.ನಗರ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸಿ.ಪಿ. ರಮೇಶ್ ಕುಮಾರ್ ಆಯ್ಕೆ

ಕೆ.ಆರ್.ನಗರ: ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷರಾಗಿ ಚಿಕ್ಕವಡ್ಡರಗುಡಿ ಸಿ.ಪಿ.ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹನುಮನಹಳ್ಳಿ ಲೊಕೇಶ್ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ಅರಕೆರೆ ವಿರಕ್ತ ಮಠದಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ನಿರ್ದೇಶಕರುಗಳ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಈ ವಿಚಾರ ತಿಳಿಸಿದರು.

ಪುರುಷ ನಿರ್ದೇಶಕರುಗಳಾಗಿ ಕುಪ್ಪೆಮಹದೇವಸ್ವಾಮಿ, ರಾಜಶೇಖರ, ಎಲ್.ಆರ್.ಮಹದೇವಪ್ಪ, ಎನ್.ಎಸ್.ಮಂಜುನಾಥ್, ಜ್ಞಾನಾನಂದ, ಎ.ಸಿ.ವಿರೂಪಾಕ್ಷ, ಸಿ.ವಿ.ಆನಂದ್, ಕೆ.ಎಸ್.ಉಮಾಶಂಕರ್, ಕೆ.ಬಿ.ಪ್ರಕಾಶ್, ಎ.ಆರ್.ಮಹದೇವಪ್ಪ, ತೀರ್ಥೇಶ್, ಕೆ.ಎಸ್.ಸೋಮೇಶ್, ಹೆಚ್.ಎಸ್.ಮಹದೇವಪ್ಪ ಆಯ್ಕೆಯಾಗಿದ್ದಾರೆ ಎಂದರು.

ಇವರೊಂದಿಗೆ ಮಹಿಳಾ ವಿಭಾಗದ ನಿರ್ದೇಶಕರಾಗಿ ಸಿ.ಇ.ತ್ರಿವೇಣಿ, ಹೆಚ್.ಎನ್.ಸುನಂದಮ್ಮ, ಬಸಮ್ಮಣ್ಣಿ, ವೀಣಾಕುಮಾರಿ, ಕೆ.ಸಿ.ಶಿಲ್ಪಾ, ರಾಜೇಶ್ವರಿ ಹಾಗೂ ನೇತ್ರಾವತಿ ಚುನಾಯಿತರಾಗಿದ್ದಾರೆಂದು ಪ್ರಕಟಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಪಿ.ರಮೇಶ್ ಕುಮಾರ್ ಮಾತನಾಡಿ ಮಹಾ ಸಭಾದ ಅಧ್ಯಕ್ಷನಾಗಿ ನಾನು ಆಯ್ಕೆಯಾಗಲು ಕಾರಣರಾದ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ವೀರಶೈವ ಲಿಂಗಾಯಿತ ಸಮಾಜದ ಬಾಂದವರಿಗೆ ಅಭಾರಿಯಾಗಿದ್ದೇನೆ ಎಂದರು.

ಸರ್ವರ ಸಹಕಾರದಿಂದ ನಿರ್ಮಾಣ ಹಂತದಲ್ಲಿರುವ ಬಸವ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರಲ್ಲದೆ ಇದಕ್ಕೆ ಸರ್ವರೂ ಸಹಕಾರ ನೀಡಬೇಕು ಎಂದು ತಿಳಿಸಿದರು.

ಭವನದ ಕಾಮಗಾರಿ ಆರಂಬಿಸುವ ಸಂಬಂದ ಈಗಾಗಲೇ ದಾಖಲೆಗಳನ್ನು ತಹಸೀಲ್ದಾರರನ್ನು ಬೇಟಿ ಮಾಡಿ ಪರಿಶೀಲನೆ ನಡೆಸಿದ್ದು ಮುಂದೆ ಮಹಾಸಭಾದ ಪದಾಧಿಕಾರಿಗಳು ಹಾಗೂ ಸಮಾಜದ ಪ್ರಮುಖರೊಂದಿಗೆ ಚರ್ಚೆ ಮಾಡಲಾಗುತ್ತದೆಂದು ಮಾಹಿತಿ ನೀಡಿದರು.

ಆನಂತರ ಈ ವಿಚಾರವನ್ನು ಕ್ಷೇತ್ರದ ಶಾಸಕರೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳು ಸೇರಿದಂತೆ ಸಂಬಂದಿತ ಸಚಿವರು ಹಾಗೂ ಅಖಿಲ ಭಾರತ ಮಹಾ ಸಭಾದ ರಾಜ್ಯ ಮತ್ತು ಜಿಲ್ಲಾ ಘಟಕದವರೊಂದಿಗೂ ಮಾತನಾಡುವುದಾಗಿ ಘೋಷಿಸಿದರು.

ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ ಅವಿರೋಧವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಬದ್ದತೆಯಿಂದ ಕೆಲಸ ನಿರ್ವಹಣೆ ಮಾಡಬೇಕೆಂದು ಸಲಹೆ ನೀಡಿದರು.

ಸಹಾಯಕ ಚುನಾವಣಾಧಿಕಾರಿ ಲೋಕೇಶ್, ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಶಿವಲಿಂಗಯ್ಯ, ಮನೋಹರಿನಾಗರಾಜು, ಎಸ್.ವಿ.ಪ್ರಕಾಶ್, ಕೆ.ಎಸ್.ಸಿದ್ದೇಶ್, ಕೊಡೆಯಾಲಮಹೇಶ್, ಪುಟ್ಟರಾಜು, ಸತ್ಯ, ಆನಂದ್ ಮತ್ತಿತರರು ಇದ್ದರು.


RELATED ARTICLES
- Advertisment -
Google search engine

Most Popular