ಮೈಸೂರು : ಶಾಸಕ ಜಿ.ಟಿ ದೇವೇಗೌಡರು ತಪ್ಪನ್ನು ತಿದ್ದಿಕೊಂಡು ಪಕ್ಷದಲ್ಲೇ ಉಳಿದರೇ ನಮ್ಮ ಅಭ್ಯಂತರವಿಲ್ಲ ಎಂದು ಮಾಜಿ ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.
ನಿನ್ನೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನ ಶಾಸಕ ಜಿ.ಟಿ ದೇವೇಗೌಡರು ಭೇಟಿಯಾಗಿ ಶುಭಕೋರಿದ ವಿಚಾರ ಮತ್ತು 2028ಕ್ಕೆ ಜೆಡಿಎಸ್ ನಿಂದಲೇ ಸ್ಪರ್ಧೆ ಎಂಬ ಹೇಳಿಕೆ ಕುರಿತು ಮಾತನಾಡಿದ ಸಾ.ರಾ ಮಹೇಶ್ , ವರಿಷ್ಠರ ಬಳಿ ಜಿಟಿ ದೇವೇಗೌಡರು ನಂಬಿಕೆ ಉಳಿಸಿಕೊಂಡರೆ ನಮ್ಮ ಅಭ್ಯಂತರವಿಲ್ಲ. ಜಿಟಿ ದೇವೇಗೌಡರಿಂದ ನಮ್ಮ ಪಕ್ಷಕ್ಕೆ ಬಹಳ ನಷ್ಟವಾಗಿದೆ. ಅವರು ಒಂದೊಂದು ಚುನಾವಣೆಗೆ ಒಂದೊಂದು ತೀರ್ಮಾನ ಮಾಡುತ್ತಾರೆ. ಇದೀಗ ಅವರ ತೀರ್ಮಾನದಿಂದ ಕಾರ್ಯಕರ್ತರಿಗೆ ಅಘಾತವಾಗಿದೆ ಎಂದರು.
ಜೆಡಿಎಸ್ ಪಕ್ಷಕ್ಕಿಂತ ನಮಗೆ ಯಾರೂ ದೊಡ್ಡವರಲ್ಲ. ಜಿಟಿ ದೇವೇಗೌಡರಿಗೆ ಪಕ್ಷ ಎಲ್ಲಾ ಕೊಟ್ಟಿತ್ತು. ಆದರೆ ಮೋಸ ಮಾಡಿದರು. ಹಾಗಾಗಿ ಈ ಭಾಗದಲ್ಲಿ ಸಾಮೂಹಿಕ ನಾಯಕತ್ವ ಕಟ್ಟಿಕೊಂಡಿದ್ದೇವೆ. ನಾಳೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮಾವೇಶವಿದೆ ಆ ಕಾರಣ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ . ಈ ಎಲ್ಲಾ ತಂತ್ರಗಳು ನಮಗೆ ಅರ್ಥವಾಗತ್ತದೆ ಎಂದು ಸಾ.ರಾ ಮಹೇಶ್ ಹೇಳಿದರು.



