ಮೈಸೂರು : ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧಿವತಿಯಿಂದ ಆಯೋಜಿಸಿರುವ ಎರಡು ದಿನಗಳ ಮೇಳದಲ್ಲಿ ವಿವಿಧ ಬಗೆಯ ಮಾವು, ಹಲಸಿನ ಘಮಲು ಎಲ್ಲರ ಕೈ ಬಿಸಿ ಕರೆಯುತ್ತಿದೆ.
ಬೇಸಿಗೆಯ ಹಣ್ಣಿನ ಸೀಸನ್‌ಗೆ ಮತ್ತಷ್ಟು ರಂಗು ತುಂಬಿರುವ ಮಾವು-ಹಲಸಿನ ಮೇಳದಲ್ಲಿ ಹಲಸಿನ ವಿವಿಧ ತಳಿಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ರುಚಿ, ಗುಣಮಟ್ಟ ಹಾಗೂ ಕೈಗೆಟಕುವ ದರಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಂಪು, ಹಳದಿ ಮತ್ತು ಬಿಳಿ ಬಣ್ಣದ ಹಲಸು ಒಂದಡೆಯಾದರೆ ರಸಪುರಿ, ಬಾದಾಮಿ, ಸೆಂಧೂರ, ಮಲಗೋಬ ಸೇರಿದಂತೆ ವಿವಿಧ ಬಗೆಯ ಹಣ್ಣುಗಳ ಸವಿಯಲು ಸಾರ್ವಜನಿಕರು ಮುಂದಾಗಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯ ಪ್ರಸಿದ್ಧ ಕೆಂಪು ತೊಳೆಗಳ ‘ಚಂದ್ರ’ ಹಲಸನ್ನು ಮೇಳದಲ್ಲಿ ಮಾರಾಟಕ್ಕೆ ತರಲಾಗಿದ್ದು, ಇದು ಗ್ರಾಹಕರ ಗಮನ ಸೆಳೆಯುತ್ತಿದೆ. ಕೊಳ್ಳೇಗಾಲ, ಪಿರಿಯಾಪಟ್ಟಣ, ದೊಡ್ಡ ಬಳ್ಳಾಪುರ, ನಾಗರಹೊಳೆ, ತುಮಕೂರು ಪ್ರದೇಶದಿಂದ ಬಂದಿರುವ ರೈತರು ಗುಣಮಟ್ಟದ ಹಲಸಿನ ಕಾಯಿ ಮತ್ತು ತೊಳೆಗಳನ್ನು ಜೋರಾಗಿ ಮಾರಾಟ ಮಾಡುತ್ತಿದ್ದರು.
ಮೇಳದಲ್ಲಿ ಉಂಡೆ ಹಲಸಿನ ತೊಳೆ ಪ್ಲೇಟ್‌ಗೆ ಹಳದಿ ತಳಿ ೫೦ರೂ., ಕೆಂಪು ಮತ್ತು ಕೇಸರಿ ತಳಿಗಳಿಗೆ ೬೦ರೂ.ದರ ನಿಗದಿ ವಾಡಲಾಗಿದೆ. ಇದೇ ವೇಳೆ ೨೫೦ಗ್ರಾಂ ಪ್ಯಾಕ್‌ಗಳಲ್ಲಿ ಬಿಡಿಸಿದ ತೊಳೆಗಳಿಗೆ ಹಳದಿ ತಳಿ ೫೦ರೂ.ಹಾಗೂ ಕೆಂಪು, ಕೇಸರಿ ತಳಿಗಳಿಗೆ ತಲಾ ೭೦ ರೂ.ದರ ನಿಗದಿಪಡಿಸಲಾಗಿದೆ. ಮಾವಿನ ಹಣ್ಣಿನ ದರ: ದಶೇರಿ ೧೫೦ ರೂ., ಕಾಲಪಾಡಿ ೧೮೦ ರೂ., ರಸಪುರಿ ೧೩೦ ರೂ., ಬಾದಾಮಿ ೧೫೦ ರೂ., ಸೆಂದೂರ ೧೨೦ ರೂ., ಮಲಗೋವ ೨೦೦ ರೂ., ಸಕ್ಕರೆಗುತ್ತಿ ೨೦೦ ರೂ., ಇಂಪೋಟ್ ಬೆಂಗಾಲ್ ೨೦೦ ರೂ., ತೋತಾಪುರಿ ೫೦ ರೂ., ಚೈಗನವಳ್ಳಿ ೮೦ ರೂ., ಮಲ್ಲಿಕಾ ೧೫೦ ರೂ. ಸೇರಿದಂತೆ ವಿಭಿನ್ನ ಬಣ್ಣ, ರುಚಿ ಮತ್ತು ಸುವಾಸನೆಯ ಹಲಸಿನ ಮತ್ತು ಮಾವಿನ ಹಣ್ಣನ್ನು ಸವಿಯಲು ಜನರು ಉತ್ಸಾಹದಿಂದ ಮೇಳಕ್ಕೆ ಆಗಮಿಸುತ್ತಿದ್ದಾರೆ.
ಜೊತೆಗೆ ಹಲಸಿನ ದೋಸೆಹಿಟ್ಟು ೧೫೦ ರೂ., ಕಾಳ್ಪಾಡಿ ೧೮೦ ರೂ., ಗರಮುರಿ ೧೩೦ ರೂ., ಬಾದಾಮಿ ಉತ್ಪನ್ನ ೧೫೦ ರೂ., ಸಂದಂರ್ ೧೨೦ ರೂ., ಮಿಲ್ಕ್‌ಶೇಕ್ ಮತ್ತು ಸಕ್ಕರೆಗಟ್ಟಿ ತಲಾ ೨೦೦ ರೂ.ದರದಲ್ಲಿ ವಾರಾಟವಾಗುತ್ತಿವೆ. ಜೊತೆಗೆ ಹಲಸು ಪಾಪಡ್ ೨೦೦ ರೂ. ಕೋಡುಬಳೆ ೫೦ ರೂ. ಪೈನ್ ಆಪಲ್ ಉತ್ಪನ್ನ ೮೦ ಹಾಗೂ ಮಲ್ಲಿಕಾ ಉತ್ಪನ್ನ ೧೫೦ ದರದಲ್ಲಿ ಲಭ್ಯವಿದ್ದು, ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ರುದ್ರಾಕ್ಷಿ ಬಕ್ಕೆ, ಸಿಂಧೂರ, ಸರ್ವ ಋತು, ಅಂಟು ರಹಿತ, ನಾಗಚಂದ್ರ ಮತ್ತು ರಾಮಚಂದ್ರ ಸೇರಿದಂತೆ ಹಲಸಿನ ವಿವಿಧ ತಳಿಗಳು ವಾರಾಟಕ್ಕಿವೆ. ಸಸ್ಯ ಜಾತಿ ಮತ್ತು ರೈತರ ಹಕ್ಕುಗಳ ರಕ್ಷಣಾ ಪ್ರಾಧಿಕಾರದಲ್ಲಿ ನೋಂದಾಯಿತ ಕರ್ನಾಟಕದ ಮೊದಲ ಕೆಂಪು ಹಲಸಿನ ತಳಿಗಳಾದ ‘ಸಿದ್ದು ಹಲಸು’ ಮತ್ತು ‘ಶಂಕರ’ ಸಸಿಗಳೂ ಲಭ್ಯವಿವೆ.
ಎರಡು ದಿನಗಳ ಮೇಳಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಮಾತನಾಡಿ, ವಿದೇಶಿ ಹಣ್ಣುಗಳ ಮೋಹಕ್ಕೆ ಒಳಗಾಗಿರುವ ಗ್ರಾಹಕರು ನಮ್ಮ ಸ್ಥಳೀಯ ಹಲಸನ್ನು ಮರೆತಿದ್ದಾರೆ. ಹಲಸು ಬರ ಪ್ರದೇಶಗಳ ರೈತರ ಪಾಲಿಗೆ ಕಲ್ಪವೃಕ್ಷದಂತಿದೆ. ಹವಾವಾನ ಬದಲಾವಣೆ ಹಾಗೂ ಅನಿುಂಮಿತ ಮಳೆಯ ನಡುಯೂ ಬೆಳೆಯಬಲ್ಲ ಸಾಮರ್ಥ್ಯ ಇದಕ್ಕಿದೆ. ಔಷಧೀಯ ಗುಣಗಳನ್ನು ಹೊಂದಿರುವ ಹಲಸಿನ ಬಳಕೆಯನ್ನು ಉತ್ತೇಜಿಸುವ ಮೂಲಕ ಗ್ರಾಹಕರು ಅದನ್ನು ಮುಖ್ಯವಾಹಿನಿಗೆ ತರಬಹುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಬೀಜ ಸಂರಕ್ಷಕ ಸೈಯದ್ ಘನಿ ಖಾನ್ ಮಾತನಾಡಿದರು. ಐಸಿಎಆರ್-ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಅಧ್ಯಕ್ಷತೆ ವಹಿಸಿದ್ದರು. ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.



