Monday, May 18, 2026
Google search engine

Homeರಾಜ್ಯಭಾರೀ ಮಳೆಗೆ ಅವಾಂತರ: ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ವ್ಯತ್ಯಯ

ಭಾರೀ ಮಳೆಗೆ ಅವಾಂತರ: ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ವ್ಯತ್ಯಯ

ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ಸುರಿದ ಗುಡುಗು ಸಿಡಿಲು ಸಹಿತ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಮೈಸೂರು – ಶಿವಮೊಗ್ಗ ಹಾಗೂ ಶಿವಮೊಗ್ಗ – ತಾಳಗುಪ್ಪ ಪ್ಯಾಸೆಂಜರ್ ಟ್ರೈನ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗಿತ್ತು.

ಮಳೆಗಾಳಿಗೆ ರೈಲ್ವೆ ಟ್ರ್ಯಾಕ್‌ ಮೇಲೆ ಬೃಹತ್ ಮರ ಬಿದ್ದಿದ್ದು, ವಿದ್ಯುತ್ ಲೇನ್ ತುಂಡಾಗಿದೆ. ಇದರಿಂದಾಗಿ ಶಿವಮೊಗ್ಗ- ಚಿಕ್ಕಮಗಳೂರು ಪ್ಯಾಸೆಂಜರ್ ರೈಲು, ಬೆಂಗಳೂರು- ಶಿವಮೊಗ್ಗ- ಜನಶತಾಬ್ಧಿ ರೈಲು ಸಂಚಾರಕ್ಕೂ ಅಡಚಣೆಯಾಗಿದೆ. ಮರ ತೆರವುಗೊಳಿಸಿ, ವಿದ್ಯುತ್ ಲೇನ್ ದುರಸ್ತಿ ಮಾಡಿದ ಬಳಿಕ ರೈಲು ಸಂಚಾರ ಪುನಃ ಆರಂಭವಾಗಿದೆ. 

ಇನ್ನೂ ಧಾರಾಕಾರ ಮಳೆಗೆ ಸಿಡಿಲು ಬಡಿದು ಸುಮಾರು 50 ಕುರಿಗಳು ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದಲ್ಲಿ ನಡೆದಿದೆ. 

ಇನ್ನೂ ಈ ಭಾರಿ ಮಳೆಗೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಮಾರಿಕಣಿವೆ ಮೂಲದ ನರಸಿಂಹಮೂರ್ತಿ ಎಂಬುವವರಿಗೆ ಸೇರಿದ್ದ ಕುರಿಗಳು ಸಾವನ್ನಪ್ಪಿವೆ. ಕಳೆದ 4 ತಿಂಗಳಿಂದ ಈತ ಶಿವಮೊಗ್ಗದಲ್ಲಿ ಕುರಿ ಮೇಯಿಸುತ್ತಿದ್ದ. ಸಿರಿಯೂರು ಗ್ರಾಮದ ರವಿಕುಮಾರ್ ಎನ್ನುವವರ ತೋಟದಲ್ಲಿ ಕುರಿಗಳನ್ನು ಬೀಡುಬಿಡಲಾಗಿತ್ತು. ತಡರಾತ್ರಿ ತೋಟದಲ್ಲಿ ಕುರಿಗಳು ಮಲಗಿದ್ದ ವೇಳೆ ಸುರಿದ ಭಾರೀ ಮಳೆಯಲ್ಲಿ ಸಿಡಿಲು ಬಡಿದು 400 ಕುರಿಗಳ ಪೈಕಿ 50 ಕುರಿಗಳು ಸಾವನ್ನಪ್ಪಿವೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

.

RELATED ARTICLES
- Advertisment -
Google search engine

Most Popular