Monday, May 18, 2026
Google search engine

Homeಕ್ರೀಡೆಪ್ಲೇ ಆಫ್‌ ಗೆ ಲಗ್ಗೆ ಇಟ್ಟ ಮೊದಲ ತಂಡ ಆರ್‌ಸಿಬಿ; ಪಂಜಾಬ್‌ ಹಾದಿ ದುರ್ಗಮ!

ಪ್ಲೇ ಆಫ್‌ ಗೆ ಲಗ್ಗೆ ಇಟ್ಟ ಮೊದಲ ತಂಡ ಆರ್‌ಸಿಬಿ; ಪಂಜಾಬ್‌ ಹಾದಿ ದುರ್ಗಮ!

ಬೆಂಗಳೂರು : ಐಪಿಎಲ್ 2026ರಲ್ಲಿ ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ರಸಕ್ತ ಸೀಸನ್‌ ನಲ್ಲಿ ಪ್ಲೇಆಫ್ ಹಂತ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 5 ವಿಕೆಟ್‌ ಗಳ ಗೆಲುವು ದಾಖಲಿಸಿದೆ.

ಅಂಕ ಪಟ್ಟಿಯಲ್ಲಿ ಆರ್‌ಸಿಬಿ ಟಾಪ್‌

ಪಂಜಾಬ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಆರ್‌ ಸಿಬಿ ಪ್ರಸಕ್ತ ಸೀಸನ್‌ ನಲ್ಲಿ 9ನೇ ಜಯ ದಾಖಲಿಸಿದೆ. ಸದ್ಯ 13 ಪಂದ್ಯಗಳಿಂದ 18 ಅಂಕಗಳನ್ನು ಪಡೆದಿರುವ ಬೆಂಗಳೂರು ಪ್ಲೇಆಫ್ ಟಿಕೆಟ್ ಖಚಿತಪಡಿಸಿಕೊಂಡಿದೆ. ಇನ್ನುಳಿದಂತೆ ಗುಜರಾತ್ ಟೈಟನ್ಸ್ (13 ಪಂದ್ಯ, 16 ಅಂಕ) ಎರಡನೇ ಸ್ಥಾನದಲ್ಲಿದ್ದರೆ, ಸನ್‌ ರೈಸರ್ಸ್ ಹೈದರಾಬಾದ್ (12 ಪಂದ್ಯ, 14 ಅಂಕ) ಮೂರನೇ ಸ್ಥಾನದಲ್ಲಿದೆ.

ಮತ್ತೊಂದೆಡೆ, ಸತತ 6ನೇ ಸೋಲು ಅನುಭವಿಸಿದ ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ ಹಾದಿ ಈಗ ಕಠಿಣವಾಗಿದೆ. ಪಂಜಾಬ್ ಸದ್ಯ 13 ಪಂದ್ಯಗಳಿಂದ 13 ಅಂಕಗಳನ್ನು ಹೊಂದಿದೆ.

ಇತರೆ ತಂಡಗಳ ಪ್ಲೇ ಆಫ್ ಲೆಕ್ಕಾಚಾರ

ಡೆಲ್ಲಿ ವಿರುದ್ಧದ ಸೋಲಿನಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇ ಆಫ್ ಲೆಕ್ಕಾಚಾರ ಹದಗೆಟ್ಟಿದೆ. 12 ಪಂದ್ಯಗಳಿಂದ 12 ಅಂಕ ಹೊಂದಿರುವ ರಾಜಸ್ಥಾನ್, ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಲ್ಲದೆ, ಇತರೆ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಬೇಕಿದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ (12 ಅಂಕ) 6ನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ (13 ಪಂದ್ಯ, 12 ಅಂಕ) 7ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ (12 ಪಂದ್ಯ, 11 ಅಂಕ) ಇನ್ನೂ ಕೂಡ ರೇಸ್‌ ನಲ್ಲಿದೆ.

ಅಬ್ಬರಿಸಿದ ಆರ್‌ ಸಿಬಿ ಬ್ಯಾಟರ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ವೆಂಕಟೇಶ್ ಅಯ್ಯರ್: 40 ಎಸೆತಗಳಲ್ಲಿ 73 ರನ್ (ಸ್ಫೋಟಕ ಬ್ಯಾಟಿಂಗ್), ವಿರಾಟ್ ಕೊಹ್ಲಿ: 37 ಎಸೆತಗಳಲ್ಲಿ 58 ರನ್ (4 ಬೌಂಡರಿ, 3 ಸಿಕ್ಸರ್), ದೇವದತ್ ಪಡಿಕ್ಕಲ್: 25 ಎಸೆತಗಳಲ್ಲಿ 45 ರನ್

ಪಂಜಾಬ್ ಹೋರಾಟ ವ್ಯರ್ಥ

223 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಶಶಾಂಕ್ ಸಿಂಗ್ ಗರಿಷ್ಠ 56 ರನ್ ಗಳಿಸಿದರೆ, ಕೂಪರ್ ಕಾನೋಲಿ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 37 ರನ್ ಕಾಣಿಕೆ ನೀಡಿದರು.

ಆರ್‌ಸಿಬಿ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ರಸಿಖ್ ಸಲಾಮ್ 36 ರನ್ ನೀಡಿ 3 ವಿಕೆಟ್ ಕಲೆಹಾಕಿದರೆ, ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದು ಜಯದ ಹಾದಿಯನ್ನು ಸುಲಭಗೊಳಿಸಿದರು.

RELATED ARTICLES
- Advertisment -
Google search engine

Most Popular