ಮೈಸೂರು : ಸೌಹಾರ್ದ ಸಂಘಗಳ ಕಾಯ್ದೆ, ಬದಲಾವಣೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದದ್ದು ಎಂದು ಶಿಕ್ಷಣ ನೀತಿ ಸಲಹಾ ಸಮಿತಿ ಸದಸ್ಯರೂ ಆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.
ನಗರದ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಆವರಣದ ಎಸ್.ಪಿ.ಭಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ವತಿಯಿಂದ ಮಂಗಳವಾರ ವಿಷಯಾಧರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದಿಂದ ಇಂತಹ ವಿಷಯಾಧರಿತ ತರಬೇತಿಕಾರ್ಯಕ್ರಮ ಮಾಡುತ್ತಿರುವುದರಿಂದ ಜಾಗೃತವಾಗಿರಲು ಸಾಧ್ಯವಾಗಿದೆ. ಇತ್ತೀಚೆಗೆ ನಿಗಮಗಳಿಗೆ ಕುರಿತಂತೆ ಕೆಲವು ತಿದ್ದುಪಡಿಗಳು ಬಂದವು. ನಾಮಿನೇಷನ್‌ಗೆ ಅವಕಾಶ ಮಾಡುವುದು, ಆಡಿಟ್ ಅನ್ನು ಮೂರು ವರ್ಷಕೊಮ್ಮೆ ಸರ್ಕಾರಿ ಆಡಿಟ್ ಆಗಬೇಕು ಸೇರಿದಂತೆ ಅನೇಕ ತಿದ್ದುಪಡಿಗಳನ್ನು ಮಾಡಿದರು. ಇವೆಲ್ಲವನ್ನೂ ತರಬೇತಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ತಿಳಿಸಲು ಸಹಕಾರಿಯಾಗಿದೆ. ಸಂಘಗಳಿಗೆ ಕಾಯ್ದೆ ಬಂದು ೫ ವರ್ಷ ಆಗಿರುತ್ತದೆ. ಆದರೆ ಎಷ್ಟೋ ಜನರಿಗೆ ಅದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಎಲೆಕ್ಷನ್ ಗೆ ಹೋದಾಗಲೇ ಅವರಿಗೆ ಕಾಯ್ದೆಗಳ ಬಗ್ಗೆ ತಿಳಿಯುತ್ತದೆ. ಇಂತಹ ಮನಃಸ್ಥಿತಿಯಲ್ಲಿ ಇನ್ನೂ ಆ ರೀತಿ ಕೆಲಸ ಮಾಡುವ ಜಡತ್ವವನ್ನು ಬೆಳೆಸಿಕೊಳ್ಳಲಾಗಿದೆ. ಆದರೆ ಇಂತಹ ವಿಷಯಾಧರಿತ ಕಾರ್ಯಕ್ರಮವನ್ನು ಮಾಡುವುದರಿಂದ ಕಾಯ್ದೆಗಳ ಬಗ್ಗೆ, ಬದಲಾವಣೆಯ ಬಗ್ಗೆ ಅರಿವು ಉಂಟಾಗುತ್ತದೆ ಎಂದು ಹೇಳಿದರು.
ಹೊಸ ತಲೆಮಾರಿನ ಜನಗಳು, ಆಸಕ್ತಿಯುಳ್ಳ ಸಹಕಾರಿಗಳು ಸಂಸ್ಥೆಗಳನ್ನು ಪ್ರಾರಂಭ ಮಾಡುವುದರಿಂದ ಅವರು ಇಂತಹ ಕಾರ್ಯಕ್ರಮಗಳಿಗೆ ಆಸಕ್ತಿಯಿಂದ ಭಾಗವಹಿಸಿ ವಿಷಯವನ್ನು ಗ್ರಹಿಸಿ ಅದನ್ನು ಪಾಲಿಸುವುದನ್ನು ನೋಡುತ್ತೇವೆ. ಆಸಕ್ತ ತಂಡಗಳಿವೆಯೋ ಅವರು ಸೇರಿ ಮಾಡಬೇಕಾದ ಸಹಕಾರ ಸಂಘಗಳ ದೃಷ್ಟಿಯಲ್ಲಿ ಸೌಹಾರ್ದ ಕಾಯ್ದೆ ಬಂದಿದ್ದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ವೃತ್ತಿಪರ ನಿರ್ದೇಶಕ ಬಿ.ಮಹದೇವಸ್ವಾಮಿ, ಶ್ರೀ ಗುರುನರಸಿಂಹ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಸೋಮಯಾಜಿ , ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಎಸ್.ಪಿ.ಭಗೀರಥ ಹಾಜರಿದ್ದರು.



