Saturday, May 30, 2026
Google search engine

HomeUncategorizedರಾಷ್ಟ್ರೀಯಮುಂಬೈನಲ್ಲಿ ಸಿಎನ್‌ಜಿ ದರ ಮತ್ತೆ ಏರಿಕೆ: ಪ್ರತಿ ಕೆಜಿಗೆ ₹2 ಹೆಚ್ಚಳ

ಮುಂಬೈನಲ್ಲಿ ಸಿಎನ್‌ಜಿ ದರ ಮತ್ತೆ ಏರಿಕೆ: ಪ್ರತಿ ಕೆಜಿಗೆ ₹2 ಹೆಚ್ಚಳ

ಮುಂಬೈ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ನಡುವೆಯೇ ಇದೀಗ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಬಳಕೆದಾರರಿಗೂ ಮತ್ತೊಂದು ಬೆಲೆ ಏರಿಕೆಯ ಹೊರೆ ಬಿದ್ದಿದೆ. ಸರ್ಕಾರಿ ಅನಿಲ ವಿತರಕ ಸಂಸ್ಥೆಯಾದ ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಮುಂಬೈನಲ್ಲಿ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ ₹2 ಹೆಚ್ಚಿಸಿದ್ದು, ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ಪರಿಷ್ಕೃತ ದರದ ಪ್ರಕಾರ, ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ ₹86 ಆಗಿದೆ. ಜೊತೆಗೆ ಗೃಹ ಬಳಕೆಯ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ದರವನ್ನು ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (SCM) 50 ಪೈಸೆ ಹೆಚ್ಚಿಸಲಾಗಿದೆ. ಈ ದರ ಪರಿಷ್ಕರಣೆಯಿಂದ ಗೃಹ ಬಳಕೆದಾರರು ಹಾಗೂ ವಾಹನ ಚಾಲಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳಲಿದೆ.

ಮೇ ತಿಂಗಳಲ್ಲೇ ಇದು ಎರಡನೇ ಬಾರಿಗೆ ಸಿಎನ್‌ಜಿ ದರ ಏರಿಕೆಯಾಗಿರುವುದು ಗಮನಾರ್ಹ. ಈ ಹಿಂದೆ ಮೇ 14ರಂದು ಮುಂಬೈನಲ್ಲಿ ಪ್ರತಿ ಕೆಜಿಗೆ ₹2 ಹೆಚ್ಚಿಸಲಾಗಿತ್ತು. ಅಲ್ಲದೆ ಮೇ 26ರಂದು ದೆಹಲಿಯಲ್ಲೂ ಸಿಎನ್‌ಜಿ ದರದಲ್ಲಿ ಇದೇ ಪ್ರಮಾಣದ ಏರಿಕೆ ಮಾಡಲಾಗಿತ್ತು.

ಹೊಸ ದರವು ಮುಂಬೈ, ಥಾಣೆ, ನವಿ ಮುಂಬೈ ಹಾಗೂ ಮುಂಬೈ ಮಹಾನಗರ ಪ್ರದೇಶದ ಇತರ ಭಾಗಗಳಿಗೆ ಅನ್ವಯವಾಗಲಿದೆ. ಸಿಎನ್‌ಜಿ ಬೆಲೆ ಏರಿಕೆಯಿಂದ ಆಟೋ, ಟ್ಯಾಕ್ಸಿ, ಶಾಲಾ ವ್ಯಾನ್ ಹಾಗೂ ಖಾಸಗಿ ವಾಹನ ಚಾಲಕರಿಗೆ ಹೆಚ್ಚುವರಿ ಹೊರೆ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಿಕರ ಮತ್ತು ಸರಕು ಸಾಗಣೆ ದರಗಳ ಮೇಲೂ ಇದರ ಪರಿಣಾಮ ಬೀಳಬಹುದು ಎಂದು ವಾಹನ ಚಾಲಕರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

RELATED ARTICLES
- Advertisment -
Google search engine

Most Popular