Wednesday, June 3, 2026
Google search engine

Homeರಾಜ್ಯಸುದ್ದಿಜಾಲವಿಶ್ವ ಬೈಸಿಕಲ್ ದಿನಾಚರಣೆ: ಆರೋಗ್ಯಕರ ಜೀವನಶೈಲಿಗೆ ಸೈಕ್ಲಿಂಗ್ ಅಳವಡಿಸಿಕೊಳ್ಳುವಂತೆ ಎಸಿಪಿ ಚಂದ್ರಶೇಖರ್ ಕರೆ

ವಿಶ್ವ ಬೈಸಿಕಲ್ ದಿನಾಚರಣೆ: ಆರೋಗ್ಯಕರ ಜೀವನಶೈಲಿಗೆ ಸೈಕ್ಲಿಂಗ್ ಅಳವಡಿಸಿಕೊಳ್ಳುವಂತೆ ಎಸಿಪಿ ಚಂದ್ರಶೇಖರ್ ಕರೆ

ಮೈಸೂರು: ದೈಹಿಕ ಆರೋಗ್ಯ, ಶಿಸ್ತು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯ ಮಹತ್ವವನ್ನು ಒತ್ತಿಹೇಳುತ್ತಾ, ಮೈಸೂರು ಅರಮನೆ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ACP) ಶ್ರೀ ಚಂದ್ರಶೇಖರ್ ಅವರು ಯುವಜನತೆ ಸೇರಿದಂತೆ ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಅವರು ಇಂದು ಸರ್ಕಾರಿ ಯುವ ಹಾಸ್ಸಲ್ ಮೈ  ಭಾರತ್  ಮೈಸೂರು,  ಮೈಸೂರು ಅಥ್ಲೀಟ್ಸ್ ಕ್ಲಬ್, ರಾಯಲ್ ರೈಡರ್ಸ್ ಮೈಸೂರು, ಸೈಕ್ಲೋಪೀಡಿಯಾ ಮೈಸೂರು ಹಾಗೂ ಮೈಸೂರು ಸೈಕ್ಲಿಂಗ್ ತಂಡಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬೈಸಿಕಲ್ ದಿನದ  ಸೈಕಲ್ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಭಾಗವಹಿಸಿ ಆರೋಗ್ಯಕರ ಜೀವನ, ರಸ್ತೆ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು.

ಇದಕ್ಕೂ ಮುನ್ನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ಶ ಬಿ. ಮಂಜುನಾಥ್ ಅವರು ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ರಮೇಶ್ ನರಸಯ್ಯ ಹಾಗೂ ಬಾಲ್ಯ ಫೌಂಡೇಶನ್ ಅಧ್ಯಕ್ಷರಾದ  ಅನಿಲ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮೈ ಭಾರತ್ ಮೈಸೂರು ಜಿಲ್ಲಾ ಯುವ ಅಧಿಕಾರಿ ಅಖಿಲ್ ಪಿ. ಅವರು ಸ್ವಾಗತ ಭಾಷಣ ಮಾಡಿ, ವಿಶ್ವ ಬೈಸಿಕಲ್ ದಿನದ ಮಹತ್ವ ಹಾಗೂ ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಬೆಳೆಸುವಲ್ಲಿ ಸೈಕ್ಲಿಂಗ್‌ನ ಪಾತ್ರವನ್ನು ವಿವರಿಸಿದರು.

ಸಂದರ್ಭದಲ್ಲಿ ಮಾತನಾಡಿದ ಬಿ. ಮಂಜುನಾಥ್ ಅವರು ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳ ಅಗತ್ಯತೆಯನ್ನು ಒತ್ತಿ ಹೇಳಿದರು.  ರಮೇಶ್ ನರಸಯ್ಯ ಅವರು ಪರಿಸರ ಸಂರಕ್ಷಣೆಯಲ್ಲಿ ಸೈಕ್ಲಿಂಗ್‌ನ ಮಹತ್ವವನ್ನು ವಿವರಿಸಿದರು. ಅನಿಲ್ ಅವರು ಯುವಜನರಲ್ಲಿ ಆರೋಗ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.

ರ‍್ಯಾಲಿಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ – ಹಾರ್ಡಿಂಗ್ ಸರ್ಕಲ್ (ಆರ್ ಗೇಟ್) – ಗನ್ ಹೌಸ್ ಸರ್ಕಲ್ – ಬಸವೇಶ್ವರ ಸರ್ಕಲ್ – ರಾಮಸ್ವಾಮಿ ಸರ್ಕಲ್ – ಅಗ್ನಿಶಾಮಕ ದಳ ವೃತ್ತ (ಸರಸ್ವತಿಪುರಂ) – ಕುಕ್ಕರಹಳ್ಳಿ – ಗದ್ದಿಗೆ ರಸ್ತೆ – ಸರ್ಕಾರಿ ಯುವ ವಸತಿ ನಿಲಯ, ಮೈಸೂರು ಮಾರ್ಗವಾಗಿ ಸಂಚರಿಸಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಎಸಿಪಿ ಚಂದ್ರಶೇಖರ್ ಅವರು ಸೈಕ್ಲಿಂಗ್ ಮೂಲಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವಲ್ಲಿ ಸಂಘಟಕರ ಪ್ರಯತ್ನವನ್ನು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಅತಿಥಿಗಳು, ಭಾಗವಹಿಸಿದ ಸೈಕ್ಲಿಸ್ಟ್‌ಗಳು, ಸ್ವಯಂಸೇವಕರು ಹಾಗೂ ಸಹಯೋಗಿ ಸಂಸ್ಥೆಗಳಿಗೆ ಸಂಘಟಕರು ಕೃತಜ್ಞತೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular