Saturday, June 6, 2026
Google search engine

Homeಅಪರಾಧಕಾನೂನುವಾಹನ ಸವಾರರಿಗೆ ಬಿಗ್ ರಿಲೀಫ್ : ಸಂಚಾರ ದಂಡಕ್ಕೆ 50% ರಿಯಾಯಿತಿ

ವಾಹನ ಸವಾರರಿಗೆ ಬಿಗ್ ರಿಲೀಫ್ : ಸಂಚಾರ ದಂಡಕ್ಕೆ 50% ರಿಯಾಯಿತಿ

ಮೈಸೂರು :  ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೆ ಸಿಹಿಸುದ್ದಿ ನೀಡಿದ್ದು,  ಶೇ 50 ರಿಯಾಯಿತಿಯಲ್ಲಿ ದಂಡವನ್ನು ಪಾವತಿಸಲು ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ  ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರುಗಳಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡುವಂತೆ ಮೈಸೂರು ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಆದೇಶದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಬಗ್ಗೆ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ದಂಡದ ಮೊತ್ತವನ್ನು ದಿನಾಂಕ 21.06.2026 ರಿಂದ 10.07.2026 (ಒಟ್ಟು 20 ದಿನಗಳು) ರವರೆಗೆ ಪಾವತಿಸಲು ಮೇಲ್ಕಂಡ ಉಲ್ಲೇಖದಂತೆ ಸರ್ಕಾರವು ಆದೇಶವನ್ನು ಹೊರಡಿಸಿದೆ.

ಆದ್ದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸಾರ್ವಜನಿಕರು ಹಾಗೂ ವಾಹನ ಚಾಲಕರುಗಳಿಗೆ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿಲಾಗಿದೆ.

ಈ ದಂಡದ ಮೊತ್ತವನ್ನು ದಿನಾಂಕ 21.06.2026 ರಿಂದ 10.07.2026 ರವರೆಗೆ ಹಾಗೂ ಮೈಸೂರು ಜಿಲ್ಲೆಯ ಯಾವುದೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದಂಡ ಪಾವತಿ ಮಾಡಿಕೊಳ್ಳುವಂತೆ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಕೋರಿಕೊಳ್ಳುತ್ತೇವೆ ಎಂದು ಮೈಸೂರು ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

RELATED ARTICLES
- Advertisment -
Google search engine

Most Popular