Friday, June 5, 2026
Google search engine

Homeರಾಜಕೀಯಖಾತೆ ಹಂಚಿಕೆ ಗೊಂದಲ ಸರಿಪಡಿಸುವ ಭರವಸೆ: "ಐ ಆ್ಯಮ್ ಹ್ಯಾಪಿ" ಎಂದ ಮುನಿಯಪ್ಪ

ಖಾತೆ ಹಂಚಿಕೆ ಗೊಂದಲ ಸರಿಪಡಿಸುವ ಭರವಸೆ: “ಐ ಆ್ಯಮ್ ಹ್ಯಾಪಿ” ಎಂದ ಮುನಿಯಪ್ಪ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಖಾತೆ ಹಂಚಿಕೆಯಾದ ಬಳಿಕ ಕಾಂಗ್ರೆಸ್‌ನಲ್ಲಿ ಕೆಲ ಅಸಮಾಧಾನಗಳು ವ್ಯಕ್ತವಾಗಿದ್ದವು. ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದರೆ, ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಕೂಡ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮುನಿಯಪ್ಪ ಅವರು ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನವನ್ನು ತಿಳಿಸಿದರು.

ಈ ವೇಳೆ ರಾಹುಲ್ ಗಾಂಧಿ ಗೊಂದಲವನ್ನು ಶೀಘ್ರದಲ್ಲೇ ಸರಿಪಡಿಸುವುದಾಗಿ ಭರವಸೆ ನೀಡಿದ್ದು, ಇದರಿಂದ ತೃಪ್ತಿಗೊಂಡಿರುವ ಮುನಿಯಪ್ಪ ಅವರು “ಐ ಆ್ಯಮ್ ಹ್ಯಾಪಿ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ನಾಯಕತ್ವದ ಭರವಸೆಯಿಂದ ಪಕ್ಷದೊಳಗಿನ ಅಸಮಾಧಾನ ಶಮನವಾಗುವ ನಿರೀಕ್ಷೆ ಮೂಡಿದೆ.

RELATED ARTICLES
- Advertisment -
Google search engine

Most Popular