Saturday, June 6, 2026
Google search engine

Homeಸ್ಥಳೀಯಮೈಸೂರು ಅಭಿವೃದ್ಧಿಗೆ ಅಗತ್ಯ ಸಹಕಾರ: ಗಜೇಂದ್ರ ಸಿಂಗ್ ಶೇಖವತ್

ಮೈಸೂರು ಅಭಿವೃದ್ಧಿಗೆ ಅಗತ್ಯ ಸಹಕಾರ: ಗಜೇಂದ್ರ ಸಿಂಗ್ ಶೇಖವತ್

ಮೈಸೂರು: ಮೈಸೂರು ಸುಂದರ ನಗರವಾಗಿದ್ದು, ಅದನ್ನು ಪ್ರವಾಸೋದ್ಯಮ ದೃಷ್ಠಿಯಿಂದಲೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಅಗತ್ಯ ಸಹಕಾರ ನೀಡಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖವತ್ ಭರವಸೆ ನೀಡಿದರು.

ನಗರದ ಕಾರಂಜಿಕೆರೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮೈಸೂರು ಪ್ರವಾಸೋದ್ಯಮದ ಅಭಿವೃದ್ಧಿಗೆ ಈಗಾಗಲೇ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ನೆರವು ನೀಡಲಾಗುವುದು. ಇಂದು ಪರಿಸರ ಸಂರಕ್ಷಣೆ ಎಂಬುದು ಕೇವಲ ಸರ್ಕಾರದಿಂದ ಮಾತ್ರವ ಸಾಧ್ಯವಿಲ್ಲ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಕೇಂದ್ರ ಸಚಿವರು ಕಾರಂಜಿಕೆರೆಯಲ್ಲಿ ದೇಸಿಯ ತಳಿಯನ್ನು ನೆಟ್ಟಿದ್ದಾರೆ. ಮೈಸೂರಿನ ಅಭಿವೃದ್ಧಿಗೆ ಈಗಾಗಲೇ ಹಲವು ಅನುದಾನ ನೀಡಿದ್ದಾರೆ. ರಾಜ್ಯ ಸರ್ಕಾರದ ಯಡವಟ್ಟಿನಿಂದಾಗಿ ಮಾಲ್‌ ಕೆಲಸ ಅರ್ಧಕ್ಕೆ ನಿಂತಿದೆ. ಚಾಮುಂಡಿ ಬೆಟ್ಟದ ಕೆಲಸವೂ ಅರ್ಧಕ್ಕೆ ನಿಂತಿದೆ. ಆದರೆ, ಕಾರಂಜಿಕೆರೆ ಮುಂದುವರೆದ ಕಾಮಗಾರಿಗೆ ಅನುದಾನಕ್ಕೆ ಮನವಿ ಮಾಡುತ್ತಿದ್ದೇನೆ. ಇನ್ನೂ ಅಂಬಾರಿಯನ್ನು ಹೊರುತ್ತಿದ್ದ ಕಾಡಾನೆ ದಾಳಿಗೆ ತುತ್ತಾದ ಅರ್ಜುನನ ಸ್ಮಾರಕ ಹಾಗೂ ವೃತ್ತ ನಿರ್ಮಾಣಕ್ಕೆ ಮನವಿ ಮಾಡಿದ್ದೇನೆ. ಜತೆಗೆ ಮಡಿಕೇರಿಯ ಕೋಟೆಯನ್ನು ಈಗಾಗಲೇ ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆಯಾಗಿದೆ. ಅದರ ಅಭಿವೃದ್ಧಿಗೆ ಅನುದಾನ ಒದಗಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಲ್‌.ನಾಗೇಂದ್ರ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಂ.ಸುಬ್ಬಣ್ಣ, ಮಾಜಿ ಮೇಯರ್‌ ಶಿವಕುಮಾರ್‌, ಸಂದೇಶ್‌ ಸ್ವಾಮಿ, ಉಪ ಮೇಯರ್‌ ಶೈಲೇಂದ್ರ, ಚಾಮರಾಜ ಕ್ಷೇತ್ರದ ಮುಖಂಡ ದಿನೇಶ್‌ ಗೌಡ ಇನ್ನಿತರರು ಉಪಸ್ಥಿತರಿದ್ದರು.

ಪ್ರಾಣಿಗಳ ಸಮೀಕ್ಷೆ ಆಗಲಿ: ಯದುವೀರ
ಆನೆ ದಾಳಿಗೆ ಮಡಿಕೇರಿಯಲ್ಲಿ ಮತ್ತೊರ್ವ ವ್ಯಕ್ತಿ ಸಾವನ್ನಪ್ಪಿರುವುದು ಬೇಸರದ ಸಂಗತಿಯಾಗಿದೆ. ಇದೇ ಕಾರಣಕ್ಕಾಗಿ ಮಡಿಕೇರಿ, ಮೈಸೂರು ಭಾಗದಲ್ಲಿ ಆನೆಗಳ ಸಮೀಕ್ಷೆ ಆಗಬೇಕಿದೆ ಎಂದು ಸಂಸದ ಯದುವೀರ್‌ ಪ್ರತಿಕ್ರಿಯಿಸಿದರು.

ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಪೆಟ್ರೋಲಿಯಂ ವ್ಯವಸ್ಥೆ, ಬ್ಯಾರಿಕೇಡ್‌ ವ್ಯವಸ್ಥೆ ಹಾಗೂ ಎಸ್ಟೇಟ್‌ ಗಳಲ್ಲಿ ಅರಣ್ಯ ಇಲಾಖೆ ನಿಯಮ ಪಾಲನೆ ಮಾಡುವ ಕೆಲಸ ಆಗಬೇಕಿದೆ. ಇದೆಲ್ಲವನ್ನೂ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಅದು ಆಗದಿರುವುದರಿಂದ ಇಂತಹ ಘಟನೆ ಮರುಕಳಿಸುತ್ತಿದ್ದು, ನಾನು ಕೇವಲ ಸಾಂತ್ವಾನ ಹೇಳುವುದಕ್ಕಷ್ಟೇ ಸಾಧ್ಯವಾಗುತ್ತಿರುವುದು ಬೇಸರದ ಸಂಗತಿ ಎಂದರು.

ಜನತೆ ರಾಜ್ಯ ಸರ್ಕಾರಕ್ಕೆ ಐದು ವರ್ಷ ಕರ್ತವ್ಯ ಮಾಡಲು ಅಧಿಕಾರ ನೀಡಿದ್ದಾರೆ. ಆದರೆ, ಎರಡು ದಿನಕ್ಕೆ ಹೀಗೆ ರಾಜೀನಾಮೆ ನೀಡಿರುವುದು ಅವರಲ್ಲಿನ ಭಿನ್ನಮತವನ್ನು ತೋರಿಸುತ್ತದೆ. ಅದೆಲ್ಲವನ್ನೂ ಬದಿಗೊತ್ತಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular