Friday, June 12, 2026
Google search engine

Homeಸ್ಥಳೀಯಬಿಡದಿ ಯೋಜನೆಗೆ ಅಂತಿಮ ನೋಟಿಫಿಕೇಷನ್ ವಿರುದ್ಧ ಆಕ್ರೋಶ : ರೈತರ ಪ್ರತಿಭಟನೆಗೆ ಪೊಲೀಸ್ ದೌರ್ಜನ್ಯ :...

ಬಿಡದಿ ಯೋಜನೆಗೆ ಅಂತಿಮ ನೋಟಿಫಿಕೇಷನ್ ವಿರುದ್ಧ ಆಕ್ರೋಶ : ರೈತರ ಪ್ರತಿಭಟನೆಗೆ ಪೊಲೀಸ್ ದೌರ್ಜನ್ಯ : ಹೆಚ್‌ಡಿಕೆ ಕಿಡಿ

ಬೆಂಗಳೂರು :  ಬಿಡದಿ ಟೌನ್ ಶಿಪ್ ಗೆ ಇದೀಗ ಸರ್ಕಾರ ಅಂತಿಮ ನೋಟಿಫಿಕೇಷನ್ ಹೊರಡಿಸಿದ್ದು  ಟೌನ್ ಶಿಪ್ ಗೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಎಫ್ ಐಆರ್ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  2006ರಲ್ಲಿ ಐದು ಟೌನ್ ಶಿಪ್ ಮಾಡಬೇಕೆಂದು ನಿರ್ಧಾರ ಮಾಡಿದೆ.ಇದಕ್ಕೆ ರೈತರು ವಿರೋಧ ಮಾಡಿದ್ದರಿಂದ ಯೋಜನೆ ಸ್ಥಗಿತಗೊಳಿಸಿದೆ.  ರೈತರ ಭಾವನೆಗೆ ಬೆಲೆಕೊಟ್ಟು ಸ್ಥಗಿತ ಮಾಡಿದೆ.  ಇದೀಘ ಸರ್ಕಾರ ಅಂತಿಮ ನೋಟಿಫಿಕೇಷನ್ ಹೊರಡಿಸಿದೆ.

ಟೌನ್ ಶಿಪ್ ವಿರೋಧಿಸಿ 470 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮಾಡಲು ಹೊರಟಿರುವ ರೈತರ ಮೇಲೆ ಎಫ್ ಐಆರ್ ಹಾಕುತ್ತಿದ್ದಾರೆ.  ಶಾಂತಿಯುತ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ.  ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಜನಪ್ರತಿನಿಧಿಗಳು ಸೇರಿಕೊಂಡಿದ್ದಾರೆ ಎಂದು  ಹೆಚ್ ಡಿಕೆ ಕಿಡಿ ಕಾರಿದರು.

RELATED ARTICLES
- Advertisment -
Google search engine

Most Popular