Thursday, July 2, 2026
Google search engine

Homeರಾಜ್ಯಸುದ್ದಿಜಾಲ32 ವರ್ಷಗಳ ಸೇವೆಗೆ ಭವ್ಯ ಬೀಳ್ಕೊಡುಗೆ : ಉಪನ್ಯಾಸಕ ಆರ್.ಮೂರ್ತಿಗೆ ಬೆಳ್ಳಿ ರಥದಲ್ಲಿ ಗೌರವ

32 ವರ್ಷಗಳ ಸೇವೆಗೆ ಭವ್ಯ ಬೀಳ್ಕೊಡುಗೆ : ಉಪನ್ಯಾಸಕ ಆರ್.ಮೂರ್ತಿಗೆ ಬೆಳ್ಳಿ ರಥದಲ್ಲಿ ಗೌರವ

ಚಾಮರಾಜನಗರ : ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಭೂಗೋಳ ಶಾಸ್ತ್ರ ಉಪನ್ಯಾಸಕ ಆರ್.ಮೂರ್ತಿ ಅವರ ವಯೋನಿವೃತ್ತಿ ಸಂದರ್ಭದಲ್ಲಿ ಕಾಲೇಜು ಸಭಾಂಗಣದಲ್ಲಿ ಗೌರವಾಭಿನಂದನಾ ಕಾರ್ಯಕ್ರಮ ನೆರವೇರಿತು.

ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 32 ವರ್ಷಗಳ ನಿರಂತರ ಸೇವೆಯನ್ನು ಸ್ಮರಿಸಿ ಆರ್.ಮೂರ್ತಿಗೆ ಅಭಿನಂದನೆಗಳ ಮಹಾಪೂರವೇ ಜರುಗಿತು. ಇದೇ ವೇಳೆ ಹಿರಿಯ ವಿದ್ಯಾರ್ಥಿಗಳು ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆಯ ಮೂಲಕ ಗೌರವ ಪೂರ್ವಕ ಬೀಳ್ಕೊಡುಗೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶಿವನಂಜಪ್ಪ ಮಾತನಾಡಿ ಆರ್.ಮೂರ್ತಿರವರು ಸದಾ ಕಾಲ ಕ್ರಿಯಾಶೀಲರಾಗಿ ಕಾಲೇಜಿನ ಬೋಧನೆ ಮತ್ತು ಇತರ ಎಲ್ಲಾ ಆಡಳಿತ ಸೇವೆಯನ್ನು ನಿರಂತರವಾಗಿ ಶೃದ್ಧೆಯಿಂದ ನೆರವೇರಿಸಿಕೊಂಡು ಉತ್ತಮ ಕಾರ್ಯವನ್ನು ನಿರ್ವಹಿಸಿದ್ದವರು. ನಿವೃತ್ತ ಜೀವನ ಸುಖಕರವಾಗಿ ಇರಲಿ ಎಂದು ಆಶಿಸುತ್ತೇನೆ ಎಂದರು.

ಬಳಿಕ ಹಿರಿಯ ಉಪನ್ಯಾಸಕ ಸುರೇಶ್.ಎನ್.ಋಗ್ವೇದಿ ಮಾತನಾಡಿ ಸರಳತೆಯ ಮೂಲಕ ಉತ್ತಮ ಬೋಧನೆಯನ್ನು ನಿರ್ವಹಿಸಿ ಶೇಕಡನೂರು ಫಲಿತಾಂಶವನ್ನು ನಿರಂತರವಾಗಿ ಕಾಲೇಜಿಗೆ ತಂದುಕೊಡುವ ಮೂಲಕ ಉಪನ್ಯಾಸವಲ್ಲದೆ ರಂಗಭೂಮಿ, ನಾಟಕ, ಸಾಹಿತ್ಯ, ಕಲೆ, ಸ್ಕೌಟ್ ಮತ್ತು ಗೈಡ್‌ನಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ನಿವೃತ್ತಿಗೊಂಡ ಮೂರ್ತಿರವರ ಸೇವೆ ಸಮಾಜಕ್ಕೆ ಮತ್ತಷ್ಟು ಹೆಚ್ಚಲಿ ಎಂದರು.

ಗ್ರಾಮದ ಮುಖಂಡರಾದ ಶಿವಣ್ಣ ಮಾತನಾಡಿ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷರು, ಸಾಹಿತಿಗಳಾದ ಸೋಮಶೇಖರ ಬಿಸಲ್ವಾಡಿ ಮಾತನಾಡಿ ಸರಳ ವ್ಯಕ್ತಿತ್ವದ ಮೂರ್ತಿ ಎಲ್ಲಾ ಜನರ ನಡುವೆ ಸದಾ ಕಾಲ ಪ್ರೀತಿಯಿಂದ ಗೌರವದಿಂದ ನಡೆದುಕೊಂಡ ವ್ಯಕ್ತಿ. ನಿವೃತ್ತಿ ಸಮಾರಂಭಕ್ಕೆ ಅಪಾರ ಜನ ಆಗಮಿಸಿ, ಗೌರವಿಸಿರುವುದೇ ಸಾಕ್ಷಿಯಾಗಿದೆ ಎಂದರು.

ನಿವೃತ್ತಿ ಗೊಂಡ ಮೂರ್ತಿ ಮಾತನಾಡಿ ಕಾಲೇಜಿನಲ್ಲಿ ಉತ್ತಮ ವಾತಾವರಣ ವಿದ್ದು ನಮ್ಮ ಸೇವೆಗೆ ಎಲ್ಲಾ ಉತ್ತೇಜನ ನೀಡಿ ಆತ್ಮ ತೃಪ್ತಿಯ ಸೇವೆ ಸಲ್ಲಿಸಿದ್ದೇನೆ ಎಂದರು.

ಇದೇ ವೇಳೆ ಮಾಜಿ ಪ್ರಾಂಶುಪಾಲರಾದ ಬಂಗಾರ ನಾಯಕ್, ನಿವೃತ್ತ ಉಪನ್ಯಾಸಕರಾದ ಶ್ರೀಕಂಠ ನಾಯಕ ಉಪನ್ಯಾಸಕರಾದ ಶಿವ ಸ್ವಾಮಿ, ಶಿವರಾಮ್, ಬಸವಣ್ಣ, ಹಿರಿಯ ವಿದ್ಯಾರ್ಥಿ ನಮ್ರತ ಅರಸ್, ಸುಮಾ, ಶಂಕರ್, ಮಹಾದೇವ, ನಮ್ರತಾ ಮಾತನಾಡಿದರು. ಪ್ರಾಂಶುಪಾಲರು, ಉಪನ್ಯಾಸಕರು, ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ನಿವೃತ್ತ ಜೀವನಕ್ಕೆ ಶುಭಕೋರಿದರು.

ನಿವೃತ್ತಿ ನೆನಪಿನಲ್ಲಿ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು.

RELATED ARTICLES
- Advertisment -
Google search engine

Most Popular