Friday, July 3, 2026
Google search engine

Homeದೇಶಗ್ರಾಹಕರನ್ನು ದಾರಿ ತಪ್ಪಿಸುವ 'ಎನರ್ಜಿ ಡ್ರಿಂಕ್ಸ್' ಕ್ಲೈಮ್; ರೆಡ್ ಬುಲ್, ಸ್ಟಿಂಗ್, ಕ್ಯಾಂಪಾಗೆ FSSAI ಬಿಗ್...

ಗ್ರಾಹಕರನ್ನು ದಾರಿ ತಪ್ಪಿಸುವ ‘ಎನರ್ಜಿ ಡ್ರಿಂಕ್ಸ್’ ಕ್ಲೈಮ್; ರೆಡ್ ಬುಲ್, ಸ್ಟಿಂಗ್, ಕ್ಯಾಂಪಾಗೆ FSSAI ಬಿಗ್ ಶಾಕ್!

ಹೊಸದಿಲ್ಲಿ: ತಮ್ಮ ಉತ್ಪನ್ನಗಳ ಮೇಲೆ ‘ಎನರ್ಜಿ ಡ್ರಿಂಕ್’ ಎಂದು ನಮೂದಿಸುವ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುವಂತಹ ಜಾಹೀರಾತು ಮತ್ತು ಕ್ಲೈಮ್‌ಗಳನ್ನು ಮಾಡುತ್ತಿರುವ ರೆಡ್ ಬುಲ್, ಪೆಪ್ಸಿಕೋ ಇಂಡಿಯಾ ಮತ್ತು ಕ್ಯಾಂಪಾ ಸೇರಿದಂತೆ ಹಲವು ಪ್ರಮುಖ ಪಾನೀಯ ಬ್ರ್ಯಾಂಡ್‌ಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೋಟಿಸ್ ಜಾರಿ ಮಾಡಿದೆ. ಆಹಾರ ಸುರಕ್ಷತಾ ನಿಯಮಗಳ ಅಡಿಯಲ್ಲಿ ಇಂತಹ ಉತ್ಪನ್ನಗಳಿಗೆ ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿಲ್ಲ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಈ ವಿಷಯವನ್ನು ಹಂಚಿಕೊಂಡಿರುವ ಆಹಾರ ನಿಯಂತ್ರಣ ಸಂಸ್ಥೆಯು, ತಪ್ಪು ಬ್ರ್ಯಾಂಡಿಂಗ್ ಮತ್ತು ಲೇಬಲಿಂಗ್ ನಿಯಮಗಳ ಉಲ್ಲಂಘನೆಗಾಗಿ ಈ ಕೆಳಗಿನ ಬ್ರ್ಯಾಂಡ್‌ಗಳಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿಸಿದೆ.

ರೆಡ್ ಬುಲ್ ಎನರ್ಜಿ ಡ್ರಿಂಕ್

ಹೆಲ್ ಎನರ್ಜಿ (ಹೆಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್)

ಕ್ಯಾಂಪಾ ಎನರ್ಜಿ ಡ್ರಿಂಕ್

ಮಾನ್‌ಸ್ಟರ್ ಎನರ್ಜಿ

ಪೆಪ್ಸಿಕೋ ಇಂಡಿಯಾ ಹೊಲ್ಡಿಂಗ್ಸ್ (ಅಡ್ರಿನಾಲಿನ್ ರಶ್ ಮತ್ತು ಸ್ಟಿಂಗ್)

ನಿಯಮಗಳ ಉಲ್ಲಂಘನೆ ಏನು?

ಎಫ್‌ಎಸ್‌ಎಸ್‌ಎಐ ಪ್ರಕಾರ, ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006’ ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳಲ್ಲಿ ‘ಎನರ್ಜಿ ಡ್ರಿಂಕ್ಸ್’ ಅಥವಾ ಅಂತಹ ಯಾವುದೇ ಉತ್ಪನ್ನಗಳಿಗೆ ಯಾವುದೇ ಮಾನದಂಡಗಳನ್ನು ನಿಗದಿಪಡಿಸಲಾಗಿಲ್ಲ. ಅಲ್ಲದೆ, ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಾವಳಿ, 2011’ ರ ಅಡಿಯಲ್ಲಿರುವ ‘ಫುಡ್ ಕ್ಯಾಟಗರಿ ಸಿಸ್ಟಮ್’ ಅನ್ನು ಉತ್ಪನ್ನದ ಹೆಸರು ಅಥವಾ ಲೇಬಲಿಂಗ್ ಉದ್ದೇಶಗಳಿಗಾಗಿ ಬಳಸಬಾರದು ಎಂದು ನಿಯಂತ್ರಕರು ಸ್ಪಷ್ಟಪಡಿಸಿದ್ದಾರೆ.

ಯಾವ ರೀತಿಯ ಕ್ಲೈಮ್‌ಗಳಿಗೆ ನಿಷೇಧವಿದೆ?
ಆಹಾರ ಉತ್ಪನ್ನಗಳಿಂದ ದೇಹಕ್ಕೆ ನಿರ್ದಿಷ್ಟ ಕಾರ್ಯಕ್ಷಮತೆ ಅಥವಾ ವೈದ್ಯಕೀಯ ಪ್ರಯೋಜನಗಳು ಸಿಗುತ್ತವೆ ಎಂದು ಬಿಂಬಿಸುವುದನ್ನು ಕಾಯ್ದೆಯಡಿ ಅನುಮತಿಸಲಾಗಿಲ್ಲ. ಉದಾಹರಣೆಗೆ-

    ಎನರ್ಜಿ ಮಟ್ಟವನ್ನು ಹೆಚ್ಚಿಸುವುದು.

    ಏಕಾಗ್ರತೆಯನ್ನು (Focus) ಉತ್ತಮಗೊಳಿಸುವುದು.

    ದೇಹ ಮತ್ತು ಮನಸ್ಸಿಗೆ ಚೈತನ್ಯ ನೀಡುವುದು.

    ಮೆದುಳನ್ನು ಉತ್ತೇಜಿಸುವುದು.

    ಸಾಮಾನ್ಯ ದೌರ್ಬಲ್ಯವನ್ನು ನಿವಾರಿಸುವುದು.

ಈ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಲೇಬಲಿಂಗ್‌ನಲ್ಲಿ ‘ಎನರ್ಜಿ ಡ್ರಿಂಕ್’ ನಂತಹ ಪದಗಳನ್ನು ಬಳಸುವ ಮೂಲಕ ಪ್ರಸ್ತುತ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ನಿಯಂತ್ರಕ ಸಂಸ್ಥೆ ಆರೋಪಿಸಿದೆ. ಆಹಾರ ಮತ್ತು ಪಾನೀಯ ವಲಯದಲ್ಲಿ ತಪ್ಪು ಬ್ರ್ಯಾಂಡಿಂಗ್ ಮತ್ತು ದಾರಿ ತಪ್ಪಿಸುವ ಕ್ಲೈಮ್‌ಗಳನ್ನು ತಡೆಯಲು ಎಫ್‌ಎಸ್‌ಎಸ್‌ಎಐ ಈ ಕ್ರಮ ಕೈಗೊಂಡಿದೆ.

ಇದಕ್ಕೂ ಮುನ್ನ, ಜೂನ್ ತಿಂಗಳಿನಲ್ಲಿಯೂ ಸಹ ನಿಯಂತ್ರಕ ಸಂಸ್ಥೆಯು ಹಲವು ಫುಡ್ ಬಿಸಿನೆಸ್ ಆಪರೇಟರ್‌ಗಳಿಗೆ (FBO) ನೋಟಿಸ್ ಕಳುಹಿಸಿತ್ತು. ಗ್ರಾಹಕರ ದೂರುಗಳು ಮತ್ತು ಲೇಬಲಿಂಗ್ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು ಹಾಗೂ ತಕ್ಷಣವೇ ತಿದ್ದುಪಡಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular