Friday, July 3, 2026
Google search engine

Homeರಾಜ್ಯಸುದ್ದಿಜಾಲಪರಿಶಿಷ್ಟ ಪಂಗಡದ 28 ಗ್ರಾಮಗಳಿಗೆ ವಾಲ್ಮೀಕಿ ಸಮುದಾಯ ಭವನ: ಶಾಸಕ ಡಿ. ರವಿಶಂಕರ್

ಪರಿಶಿಷ್ಟ ಪಂಗಡದ 28 ಗ್ರಾಮಗಳಿಗೆ ವಾಲ್ಮೀಕಿ ಸಮುದಾಯ ಭವನ: ಶಾಸಕ ಡಿ. ರವಿಶಂಕರ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚು ಜನರು ಇರುವ ೨೮ ಗ್ರಾಮಗಳಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು ತಲಾ ೨೫ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಚಂದಗಾಲು ಗ್ರಾಮದಲ್ಲಿ ೨೨ ಲಕ್ಷ ರೂ.ಗಳಲ್ಲಿ ನಿರ್ಮಾಣ ಮಾಡಲಾದ ವಾಲ್ಮೀಕಿ ನಾಯಕ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು ಚುನಾವಣೆ ದೃಷ್ಟಿಯಿಂದ ಈ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಸ್ವಷ್ಟಪಡಿಸಿದರು.

ಕೆ.ಆರ್.ನಗರದ ವಾಲ್ಮೀಕಿ ನಾಯಕರ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ೧ ಕೋಟಿ.ರೂ. ನೀಡುವುದರ ಜತೆಗೆ ಭವನದ ಆವರಣದಲ್ಲಿ ದೇವಾಲಯ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ ೫ ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪಟ್ಟಣದ ೧೬ನೇ ವಾರ್ಡಿನ ವಾಲ್ಮೀಕಿ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ೧ ಕೋಟಿ. ೫೦ಲಕ್ಷ ರೂ. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಎಸ್‌ಟಿಪಿ ಯೋಜನೆಯಡಿಯಲ್ಲಿ ನಾಯಕ ಸಮುದಾಯವರು ಹೆಚ್ಚು ಜನರು ಇರುವ ಗ್ರಾಮಗಳ ಪರಿಮಿತಿ ರಸ್ತೆಗಳನ್ನು ಸಿಸಿರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಮಾಡಲು ಸಾಕಷ್ಟು ಅನುದಾನ ನೀಡುವುದರ ಜತೆಗೆ ಸಮಾಜದ ಮುಖಂಡರಿಗೆ ರಾಜಕೀಯ ಸ್ಥಾನಮಾನ ನೀಡಲಾಗಿದೆ ಎಂದು ಹೇಳಿದರು.

ರಾಜನಹಳ್ಳಿ ಮಠದಲ್ಲಿ ನಡೆಯುವ ವಾರ್ಷಿಕ ಜಾತ್ರೆಗೆ ಸ್ವಾಮೀಜಿಗಳ ಸೂಚನೆಯಂತೆ ಪ್ರತಿ ವರ್ಷ ಆರ್ಥಿಕ ಸಹಕಾರ ನೀಡಲಾಗುತ್ತಿದ್ದು, ಮುಂದಿನ ಎರಡು ವರ್ಷಗಳ ಅವಧಿಯೊಳಗೆ ಸಮಾಜದವರು ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ನುಡಿದರು.

ಕಾಂಗ್ರೆಸ್ ಪಕ್ಷದ ರಾಜ್ಯ ಎಸ್‌ಟಿ ವಿಭಾಗದ ಉಪಾಧ್ಯಕ್ಷ ಹೊಸೂರು ಕಲ್ಲಹಳ್ಳಿ ಶ್ರೀನಿವಾಸ್ ಮಾತನಾಡಿ ಕಾಂಗ್ರೆಸ್ ಪಕ್ಷ ಎಚ್.ವಿಶ್ವನಾಥ್ ರವರ ಅಧಿಕಾರ ಅವಧಿಯಲ್ಲಿ ಮತ್ತು ಡಿ.ರವಿಶಂಕರ್ ಶಾಸಕರಾದ ನಂತರ ಸಮಾಜದ ಮುಖಂಡರಿಗೆ ರಾಜಕೀಯ ಅಧಿಕಾರದ ಅವಕಾಶಗಳು ಹೆಚ್ಚು ಬಂದಿದ್ದು ಇದನ್ನು ಸಮಾಜದ ಮುಖಂಡರು ಅರಿಯಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ೧೯೭೮ರಲ್ಲಿ ನಾನು ಶಾಸಕನಾದ ನಂತರ ನಾಯಕ ಸಮಾಜದವರಿಗೆ ಹೆಚ್ಚು ರಾಜಕೀಯ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದಲ್ಲದೆ ಕೆ.ಆರ್.ನಗರದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಭವನಕ್ಕೆ ನಿವೇಶನವನ್ನು ಕೊಡಿಸಲಾಗಿತ್ತು ಎಂದು ಹೇಳಿದರು.

ಚಂದಗಾಲು ಗ್ರಾಮದ ಎಲ್ಲಾ ಸಮಾಜದ ಮುಖಂಡರುಗಳು ನನನ್ನು ಬೆಂಬಲಿಸಿ ರಾಜಕೀಯ ಅಧಿಕಾರ ಪಡೆಯಲು ಸಹಕಾರ ನೀಡಿದ್ದಾರೆ ಆದ್ದರಿಂದ ನಾನು ಬದುಕಿರುವರೆಗೂ ಚಂದಗಾಲು ಗ್ರಾಮವನ್ನು ಮರೆಯಲು ಸಾಧ್ಯವಿಲ್ಲವೆಂದು ಭಾವುಕರಾಗಿ ನುಡಿದರು.

ರಾಜನಹಳ್ಳಿ ಮಠದ ಶ್ರೀಪ್ರಸನ್ನಾಂದಸ್ವಾಮಿಜಿ ದಿವ್ಯ ಸಾನಿಧ್ಯವಹಿಸಿ ಅರ್ಶೀವಚನ ನೀಡಿದರು. ಹುಣಸೂರು ತಾಲೂಕು ನಾಯಕ ಸಮಾಜದ ಅಧ್ಯಕ್ಷ ಅಣ್ಣಯ್ಯನಾಯಕ, ಕೆ.ಆರ್.ನಗರ ತಾಲೂಕು ಅಧ್ಯಕ್ಷ ಸುಬ್ಬಕೃಷ್ಣ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್, ಸಿಡಿಪಿಓ ಅಣ್ಣಯ್ಯ, ಚಂದಗಾಲು ಗ್ರಾಮದ ಯಜಮಾನ ಲೋಕೇಶ್, ಮುಖಂಡರಾದ ಬಿ.ಮಹದೇವ್, ಶಿವಪ್ಪನಾಯಕ, ನಾಗರಾಜನಾಯಕ, ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್ ಮತ್ತಿತ್ತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular