ಪಿರಿಯಾಪಟ್ಟಣ : ನಾಡಪ್ರಭು ಕೆಂಪೇಗೌಡರ 517 ನೇ ಜಯಂತ್ಯೋತ್ಸವದ ಅಂಗವಾಗಿ ನಂಜೇಗೌಡ ನಂಜುಂಡ ರವರ ಸ್ನೇಹ ಬಳಗ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಪಾದ ಪೂಜೆ ಕಾರ್ಯಕ್ರಮದಲ್ಲಿ , ಒಕ್ಕಲಿಗ ಯುವ ಬ್ರಿಗೇಡಿನ ಸಂಸ್ಥಾಪಕ ಅಧ್ಯಕ್ಷ ಮತ್ತು ಸಮಾಜ ಸೇವಕರಾದ ನಂಜೇಗೌಡ ನಂಜುಂಡ ಅವರು ಪೌರ ಕಾರ್ಮಿಕರಿಗೆ ಪಾದ ತೊಳೆದು ಗೌರವ ಸಮರ್ಪಿಸಿದರು.
ಈ ವೇಳೆ ಮಾತನಾಡಿದ ನಂಜೇಗೌಡ ನಂಜುಂಡ, ಬೆಂಗಳೂರನ್ನು ನಿರ್ಮಿಸಿ , ಸರ್ವ ಜನಾಂಗಕ್ಕೆ ಅನ್ನ , ಅಕ್ಷರ ಮತ್ತು ಭವಿಷ್ಯ ಕಲ್ಪಿಸಿದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತ್ಯೋತ್ಸವದಲ್ಲಿ ಸದಾ ಸಮಾಜ ಸ್ವಾಸ್ಥ್ಯ , ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ , ಸಮಾಜದ ಮುಖವಾಣಿಗಳಾಗಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಪಾದ ತೊಳೆದು ಗೌರವ ಸಮರ್ಪಣೆ ಮಾಡಿದ್ದು ಮುಕ್ಕೋಟಿ ದೇವರನ್ನು ಆರಾಧನೆ ಮಾಡಿದಷ್ಟೇ ಸಂತೋಷ ವಾಗಿದೆ ಎಂದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರವಿಚಂದ್ರ ಮಾತನಾಡಿ, ನಂಜೇಗೌಡ ನಂಜುಂಡ ಅವರು ಸದಾ ನೊಂದವರ, ಬಡವರ ಪರ ನಿಲ್ಲುವ ಹಿತಚಿಂತಕರಾಗಿದ್ದು, ಜಾತಿ ಭೇದವಿಲ್ಲದೆ ಸೇವೆ ಸಲ್ಲಿಸುವ ಮೂಲಕ ಅವರು ಈ ಸಮಾಜಕ್ಕೆ ಮೇಲ್ಪಂಕ್ತಿಯನ್ನು ನಿರ್ಮಿಸಿದ್ದಾರೆ ಎಂದರು.
ಸ್ನೇಹ ಬಳಗದ ಸಂಚಾಲಕಿ ಯಶೋಧ ಮಾತನಾಡಿ, ಸದಾ ಸಮಾಜದ ಪರ ನಿಲ್ಲುವ ಸರ್ವ ಜನಾಂಗದ ಏಳಿಗೆಗಾಗಿ ದುಡಿಯುವ ನಂಜೇಗೌಡ ನಂಜುಂಡ ಅವರು ನಮ್ಮ ತಾಲ್ಲೂಕಿನ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಸ್ನೇಹ ಬಳಗದ ರಾಜೇಗೌಡ, ಮಂಜುನಾಥ್, ಸುಷ್ಮಾ ಮೋಹನ್, ಪೂರ್ಣಿಮಾ, ಒಕ್ಕಲಿಗ ಸಂಘದ ಉದಯ್, ಧನಪಾಲ್ ಗೌಡ, ಹಿಂದೂ ಮಹಾಸಭಾದ ಯಾದವ ಆಚಾರ್ಯ,
ಗಿರಿಜನ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



