Wednesday, July 8, 2026
Google search engine

Homeಅಪರಾಧತಹಶೀಲ್ದಾರ್ ಮನೆಗೆ ನುಗ್ಗಿ ಹಲ್ಲೆ, ದರೋಡೆ; ₹10 ಲಕ್ಷಕ್ಕೆ ಬೆದರಿಕೆ

ತಹಶೀಲ್ದಾರ್ ಮನೆಗೆ ನುಗ್ಗಿ ಹಲ್ಲೆ, ದರೋಡೆ; ₹10 ಲಕ್ಷಕ್ಕೆ ಬೆದರಿಕೆ

ರಾಮನಗರ: ಚನ್ನಪಟ್ಟಣದ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ತಹಶೀಲ್ದಾರ್ ನೀಡಿದ ದೂರಿನ ಮೇರೆಗೆ ಅನುಷ್ ಶಿವಪ್ಪ, ಶೋಭರಾಜ್ ಹಾಗೂ ನವೀನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜೂನ್ 29ರ ಮುಂಜಾನೆ ಪರಿಚಯದ ನೆಪದಲ್ಲಿ ಮನೆಗೆ ಬಂದ ಆರೋಪಿಗಳು ಮದ್ಯ ಸೇವಿಸಿ, ಬಳಿಕ ಜ್ಯೂಸ್ ಕುಡಿಸಿದ ನಂತರ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ತಹಶೀಲ್ದಾರ್ ಅವರನ್ನು ವಿವಸ್ತ್ರಗೊಳಿಸಿ ಚಿನ್ನದ ಉಂಗುರ, ಚಿನ್ನದ ಸರ ಹಾಗೂ ಬೆಳ್ಳಿ ಉಡುದಾರವನ್ನು ಕಸಿದುಕೊಂಡು ₹10 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ, ನಗ್ನ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ. ಗಾಯಗೊಂಡ ತಹಶೀಲ್ದಾರ್ ಚಿಕಿತ್ಸೆ ಪಡೆದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular