Sunday, July 12, 2026
Google search engine

Homeರಾಜ್ಯವಿದ್ಯಾರ್ಥಿಗಳಿಗೆ ಬಿಎಂಟಿಸಿ ಸಿಹಿಸುದ್ದಿ: ಬಸ್‌ ಪಾಸ್‌ ಅವಧಿ 1-2 ತಿಂಗಳು ವಿಸ್ತರಣೆ

ವಿದ್ಯಾರ್ಥಿಗಳಿಗೆ ಬಿಎಂಟಿಸಿ ಸಿಹಿಸುದ್ದಿ: ಬಸ್‌ ಪಾಸ್‌ ಅವಧಿ 1-2 ತಿಂಗಳು ವಿಸ್ತರಣೆ

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2025-26ನೇ ಸಾಲಿನ ವೃತ್ತಿಪರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಬಸ್‌ ಪಾಸ್‌ಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದೆ. ವೃತ್ತಿಪರ ಪದವಿ, ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಸೆಮಿಸ್ಟರ್‌ ತರಗತಿಗಳು ಮತ್ತು ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆ ಬಸ್‌ ಪಾಸ್‌ ಅವಧಿ ವಿಸ್ತರಿಸುವಂತೆ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮನವಿ ಮಾಡಿದ್ದವು.

ಈ ಮನವಿಯ ಹಿನ್ನೆಲೆಯಲ್ಲಿ ಬಿಎಂಟಿಸಿ, ವಿದ್ಯಾರ್ಥಿಗಳ ಬಸ್‌ ಪಾಸ್‌ ಅವಧಿ ಮುಕ್ತಾಯಗೊಂಡ ಬಳಿಕ ಇನ್ನೂ ಒಂದು ಅಥವಾ ಎರಡು ತಿಂಗಳವರೆಗೆ ವಿಸ್ತರಣೆ ಮಾಡಲು ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಿಂದ ತರಗತಿಗಳು ಮತ್ತು ಪರೀಕ್ಷೆಗಳ ಕುರಿತ ದೃಢೀಕರಣ ಪಡೆಯಲಾಗುವುದು.

ಬಸ್‌ ಪಾಸ್‌ ಅವಧಿ ವಿಸ್ತರಣೆಗೆ ವಿದ್ಯಾರ್ಥಿಗಳಿಂದ 100 ರೂ. ಸಂಸ್ಕರಣಾ ಶುಲ್ಕ ಪಡೆಯಲಾಗುತ್ತದೆ. ವಿಸ್ತರಣೆ ಮಾಡಿದ ಬಳಿಕ ರಶೀದಿಯಲ್ಲಿ ವಿದ್ಯಾರ್ಥಿಯ ಹೆಸರು, ಬಸ್‌ ಪಾಸ್‌ ಸಂಖ್ಯೆ ಹಾಗೂ ವಿಸ್ತರಿತ ಅವಧಿಯನ್ನು ಕಡ್ಡಾಯವಾಗಿ ನಮೂದಿಸಲಾಗುತ್ತದೆ ಎಂದಿದ್ದಾರೆ.

ಇನ್ನೂ ಬಸ್‌ ಪಾಸ್‌ ಮಾನ್ಯತಾ ಅವಧಿ ವಿಸ್ತರಣೆಯ ಕಾರ್ಯವನ್ನು ಕೇವಲ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಮಾತ್ರ ಕೈಗೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಬಸ್‌ ಪಾಸ್‌ ಹಾಗೂ ವಿಸ್ತರಣೆಯ ರಶೀದಿಯನ್ನು ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

RELATED ARTICLES
- Advertisment -
Google search engine

Most Popular