Tuesday, February 17, 2026
Google search engine

Homeಅಪರಾಧಮೈ-ಬೆಂ ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

ಮೈ-ಬೆಂ ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

ಮಂಡ್ಯ: ಮೈಸೂರು- ಬೆಂಗಳೂರು ದಶಪಥ  ಹೆದ್ದಾರಿಯಲ್ಲಿ ಕಾರು ಹೊತ್ತಿ ಉರಿದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ನಡೆದಿದೆ.

ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯೊಬ್ಬರಿಗೆ ಸೇರಿದ ಕಾರು ಹೊತ್ತಿ ಉರಿದಿದ್ದು, ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಚಾಲಕ ಕಾರು ನಿಲ್ಲಿಸಿದ್ದು, ಕಾರು ನಿಲ್ಲಿಸಿ ಲಗೇಜ್ ಕೆಳಗೆ ತೆಗದುಕೊಳ್ಳುವಷ್ಟರಲ್ಲಿ ಕಾರು ಸುಟ್ಟು ಭಸ್ಮವಾಗಿದೆ.

ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular