Monday, April 21, 2025
Google search engine

Homeರಾಜಕೀಯರಾಮನನ್ನ ವಿರೋಧಿಸೋರು ಭಾರತೀಯ ಸಂಸ್ಕೃತಿಯ ವಿರೋಧಿಗಳು: ನಳಿನ್ ಕುಮಾರ್ ಕಟೀಲ್

ರಾಮನನ್ನ ವಿರೋಧಿಸೋರು ಭಾರತೀಯ ಸಂಸ್ಕೃತಿಯ ವಿರೋಧಿಗಳು: ನಳಿನ್ ಕುಮಾರ್ ಕಟೀಲ್

ಮಂಗಳೂರು(ದಕ್ಷಿಣ ಕನ್ನಡ): ರಾಮಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ ಹೊರಗುಳಿದ ವಿಚಾರಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಬಲ್ಪದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ರಾಮಮಂದಿರ ಹೋರಾಟಗಳ ಹೊತ್ತಲ್ಲೇ ಕಾಂಗ್ರೆಸ್ ಟೀಕೆ ಮಾಡಿತ್ತು. ರಾಮ ಹುಟ್ಟೇ ಇಲ್ಲ ಅಂತ ರಾಮನ ಹುಟ್ಟಿಗೆ ಸಾಕ್ಷಿ ಕೇಳಿತ್ತು. ರಾಮ ಪ್ರತಿಷ್ಠೆ ಹೊತ್ತಲ್ಲಿ ಇದೀಗ ಅವರ ಬುದ್ದಿ ತೋರಿಸಿದ್ದಾರೆ. ದೇಶದಲ್ಲಿ ರಾಮನನ್ನ ವಿರೋಧಿಸೋರು ಭಾರತೀಯ ಸಂಸ್ಕೃತಿಯ ವಿರೋಧಿಗಳು. ಇದು ಭಾರತವನ್ನೇ ವಿರೋಧಿಸೋ ಕಾಂಗ್ರೆಸ್ ನ ಮಾನಸಿಕತೆ ಎಂದ ಅವರು,  ಇವತ್ತು ಪಲಾಯನ ಮತ್ತು ಬಹಿಷ್ಕಾರದ ಮೂಲಕ ಓಲೈಕೆ ರಾಜಕಾರಣ ತೋರಿಸಿದ್ದಾರೆ.

ಮುಸಲ್ಮಾನರ ತುಷ್ಡೀಕರಣದ ಮೂಲಕ ಹಿಂದೂ ಸಮಾಜವನ್ನೇ ಎದುರು ಹಾಕಿಕೊಂಡಿದ್ದಾರೆ.

ಕಾಂಗ್ರೆಸ್ ಕೇವಲ ರಾಮ ವಿರೋಧಿ ಅಷ್ಟೇ ಅಲ್ಲ, ಹಿಂದೂ ವಿರೋಧಿ. ಅಯೋಧ್ಯೆಗಾಗಿ ಇಡೀ ದೇಶದ ಹಿಂದೂ ಸಮಾಜ ಒಂದಾಗಿದೆ. ಆರ್.ಎಸ್.ಎಸ್ ಮಂದಿರವಾಗಿದ್ರೆ ನಾಗ್ಪುರದಲ್ಲಿ ಮಾಡ್ತಾ ಇದ್ವಿ. ಆದರೆ ಇದು ಪ್ರಭು ಶ್ರೀರಾಮ ಚಂದ್ರನ ಮಂದಿರ, ಹಿಂದೂ ಸಮಾಜದ ಮಂದಿರ. ಬಿಜೆಪಿ ಅಲ್ಲ, ವಿಎಚ್ ಪಿ ಇದನ್ನ ಮಾಡಿದ್ದು ನೋಡಿಕೊಳ್ತಾ ಇದ್ದಾರೆ ಅಂದ್ರು

RELATED ARTICLES
- Advertisment -
Google search engine

Most Popular