Tuesday, June 23, 2026
Google search engine

Homeರಾಜಕೀಯಬಿಡದಿ ಟೌನ್‌ಶಿಪ್ ವಿರೋಧ ಹೆಚ್‌ಡಿಕೆ ರಾಜಕೀಯ : ಡಿಕೆಶಿ ಬೆಳವಣಿಗೆ ತಡೆಯಲು ಹೆಚ್‌ಡಿಕೆ ನಾಟಕ :...

ಬಿಡದಿ ಟೌನ್‌ಶಿಪ್ ವಿರೋಧ ಹೆಚ್‌ಡಿಕೆ ರಾಜಕೀಯ : ಡಿಕೆಶಿ ಬೆಳವಣಿಗೆ ತಡೆಯಲು ಹೆಚ್‌ಡಿಕೆ ನಾಟಕ : ಎಂ.ಬಿ ಪಾಟೀಲ್

ವಿಜಯಪುರ:  ಬಿಡದಿ ಟೌನ್ ಶಿಪ್ ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರೋಧಿಸುತ್ತಿರುವುದು ಇದೆಲ್ಲಾ ನಾಟಕ. ಸಿಎಂ ಡಿಕೆ ಶಿವಕುಮಾರ್ ಒಕ್ಕಲಿಗರ ಲೀಡರ್ ಆಗಬಾರದೆಂದು ಈ ರೀತಿ ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ಹೆಚ್ ಡಿಕೆ ರಾಜಕೀಯ ಮಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಪ್ರಾರಂಭಿಸಿದ್ದೇ ಹೆಚ್ ಡಿಕೆ ಈಗೇಕೆ ವಿರೋಧ? ಇದರಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಅವರ 100 ಎಕರೆ ಜಮೀನಿದೆ.  ಬಿಡದಿ ಟೌನ್  ಶಿಪ್ ಗೆ ಈಗ ವಿರೋಧ ಮಾಡುತ್ತಿರುವುದು ಇದೆಲ್ಲಾ ನಾಟಕ ಎಂದರು.

ಡಿಕೆ ಶಿವಕುಮಾರ್  ಅವರು ಸಿಎಂ ಆಗಿದ್ದಾರೆ ಅಂತಾ ಇದೆಲ್ಲ ನಾಟಕ ಮಾಡುತ್ತಿದ್ದಾರೆ. ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಇದೆಲ್ಲಾ ನಡೆಸಿದ್ದಾರೆ.  ರೈತರ ವಿರೋಧವಿದ್ದರೆ ಓಕೆ.  ಆದರೆ ರಾಜಕೀಯಕ್ಕಾಗಿ ಇದನ್ನ ಮಾಡುತ್ತಿದ್ದಾರೆ ಹೆಚ್ ಡಿಕೆ ಅವರು ಆಗಲೇ ಏಕೆ ನೋಟಿಫಿಕೇಷನ್ ವಾಪಸ್ ಪಡೆಯಲಿಲ್ಲ.  ಆಗ ತಾವೇ ಮಾಡಿ ಈಗ ರಾಜಕೀಯಕ್ಕೆ ವಿರೋಧ ಮಾಡುತ್ತಿದ್ದಾರೆ  ಎಂದು ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದರು.

RELATED ARTICLES
- Advertisment -
Google search engine

Most Popular