Saturday, April 19, 2025
Google search engine

HomeUncategorizedರಾಷ್ಟ್ರೀಯಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತೆಲಂಗಾಣ  ಬುಡಕಟ್ಟು ಕಲ್ಯಾಣ ಇಂಜಿನಿಯರಿಂಗ್ ಇಲಾಖೆಯ...

ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತೆಲಂಗಾಣ  ಬುಡಕಟ್ಟು ಕಲ್ಯಾಣ ಇಂಜಿನಿಯರಿಂಗ್ ಇಲಾಖೆಯ ವಿಭಾಗದ ಮಹಿಳಾ ಅಧಿಕಾರಿ

ತೆಲಂಗಾಣ:  ತೆಲಂಗಾಣದ ಬುಡಕಟ್ಟು ಕಲ್ಯಾಣ ಇಂಜಿನಿಯರಿಂಗ್ ಇಲಾಖೆಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಸುಮಾರು 84,000 ರೂಪಾಯಿ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ದೂರು ಸ್ವೀಕರಿಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಅಧಿಕಾರಿ ಕೆ.ಜಗಜ್ಯೋತಿಯವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೈದರಾಬಾದ್‌ ನ ಮಸಾಬ್ ಟ್ಯಾಂಕ್ ಪ್ರದೇಶದ ಬೋಡುಕರ್ ಗಂಗಣ್ಣ ಎಂಬ ಗುತ್ತಿಗೆದಾರರಿಂದ ಅಧಿಕಾರಿ ಕೆ.ಜಗಜ್ಯೋತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಅನಗತ್ಯ ಲಾಭ ಪಡೆಯಲು ಜ್ಯೋತಿ ತನ್ನ ಕರ್ತವ್ಯದಲ್ಲಿ ಅಪ್ರಾಮಾಣಿಕತೆ ತೋರಿರುವುದರಿಂದ ಆಕೆಯನ್ನು ಬಂಧಿಸಲಾಗಿದ್ದು, ಹೈದರಾಬಾದ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

RELATED ARTICLES
- Advertisment -
Google search engine

Most Popular