Monday, April 21, 2025
Google search engine

Homeಅಪರಾಧಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಓರ್ವ ನಕಲಿ ಪತ್ರಕರ್ತನ ಬಂಧನ

ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಓರ್ವ ನಕಲಿ ಪತ್ರಕರ್ತನ ಬಂಧನ

ಬೆಳಗಾವಿ: ಪತ್ರಕರ್ತರ ಸೋಗಿನಲ್ಲಿ‌ ಶ್ರೀಗಂಧದ ಮರದ ತುಂಡುಗಳನ್ನ ಸಾಗಿಸುತ್ತಿದ್ದ ಓರ್ವ ನಕಲಿ ಪತ್ರಕರ್ತನನ್ನು ಹುಕ್ಕೇರಿ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ನೇತೃತ್ವದಲ್ಲಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ​ ಬಂಧಿಸಿದ್ದಾರೆ.

ಕಾರಿನ ಮೇಲೆ ಮೀಡಿಯಾ ಎಂದು ಬರೆಯಿಸಿ ಸ್ಮಗ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಬಳಿ ದಾಳಿ ನಡೆಸಿ 40 ಕೆಜಿ ಶ್ರೀಗಂಧ ಹಾಗೂ ಕಳ್ಳ ಸಾಗಾಟಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿ, ಆರೋಪಿ ಪುಂಡಲೀಕ ಭಜಂತ್ರಿಯನ್ನು ವಶಕ್ಕೆ ಪಡೆಯಲಾಗಿದೆ.

ಓರ್ವ ನಕಲಿ ಪತ್ರಕರ್ತ ಸಿಕ್ಕಿಬಿದ್ದಿದ್ದು, ಇನ್ನುಳಿದ ಪತ್ರಕರ್ತರು ಪರಾರಿಯಾಗಿದ್ದಾರೆ. ಪರಸಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಕಾರಿನಲ್ಲಿ ಪುಂಡಲೀಕ ಭಜಂತ್ರಿ ಎಂಬುವರ ನಕಲಿ ಯೂಟ್ಯೂಬ್‌ ಐಡಿ ಪತ್ತೆಯಾಗಿದೆ. ಇನ್ನು ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ನಕಲಿ ಯೂಟ್ಯೂಬ್ ವರದಿಗಾರರ ಹಾವಳಿ ಹೆಚ್ಚಾಗುತ್ತಿದ್ದು, ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular