Tuesday, April 22, 2025
Google search engine

Homeರಾಜಕೀಯವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿಯೇ ಪ್ರಹ್ಲಾದ ಜೋಶಿ: ದಿಂಗಾಲೇಶ್ವರ ಸ್ವಾಮೀಜಿ

ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿಯೇ ಪ್ರಹ್ಲಾದ ಜೋಶಿ: ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿಯೇ ಪ್ರಹ್ಲಾದ ಜೋಶಿ. ಅವರನ್ನು ಸೋಲಿಸುವುದೇ ನಮ್ಮ ಧರ್ಮಯುದ್ಧ ಎಂದು ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಹರಿಹಾಯ್ದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿ 20 ವರ್ಷದಲ್ಲಿ ಮಾಡಿದ್ದು ಲಿಂಗಾಯತರು, ಹಿಂದುಳಿದವರುನ್ನು ತುಳಿದಿದ್ದೇ ದೊಡ್ಡ ಸಾಧನೆ. ಅವರು ಅಧಿಕಾರದಲ್ಲಿ ತಮ್ಮ ಸಮಾಜದ ಎಷ್ಟು ಜನಕ್ಕೆ ಕೆಲಸಕ್ಕೆ ಸೇರಿಸಿದರು. ಇತರೆ ಸಮಾಜದವರನ್ನು ಸೇರಿಸಿದರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಜೋಶಿ ಒಡೆದಾಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಒಂದು ಮಠವನ್ನು ಎರಡು ಮಾಡುವ ಕೆಲಸ ಮಾಡುತ್ತಿದ್ದಾರೆ. ಶಿರಹಟ್ಟಿ ಮಠದ ಗುರು-ಶಿಷ್ಯರನ್ನು ಅಗಲಿಸುವ ಕಾರ್ಯ ಮಾಡುತ್ತಿದ್ದಾರೆ. ಇವರು ಹೀಗೆ ಮುಂದುವರೆಸಿದರೆ, ದೊಡ್ಡ ಪರಿಣಾಮ ಎದುರೀಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೋಶಿಯವರಿಗೆ ಅಧಿಕಾರದಲ್ಲಿದ್ದಾಗ ಸ್ವಾಮಿಗಳು, ಮಠಗಳು ಬೇಡ. ನಮ್ಮಿಬ್ಬರ ಮಧ್ಯೆ ಒಡಕುಂಟು ಮಾಡುವ ಕೆಲಸಕ್ಕೆ ಕೈ ಹಾಕುವಂತಹ ನಿಮ್ಮ ಹುಚ್ಚು ಸಾಹಸಕ್ಕೆ ಕೈ ಬಿಡಬೇಕು ಎಂದರು.

ನೀವು ಸಂಸದರಾದ ಮೇಲೆ‌ ನಮ್ಮ‌ ಸಂಸ್ಕೃತಿ, ಪರಂಪರೆ, ಮಠಗಳ ಪರಂಪರೆ ನಾಶ ಮಾಡಿದ್ದಾರೆ. ಮಠಗಳಿಗೆ ಹೋಗುವುದು, ಯಾರೋ ತಮಗೆ ಹಾಕಿದ ಶಾಲನ್ನೇ ಸ್ವಾಮಿಗಲಿಗೆ ಹಾಕಿ, ಕಾಣಿಕೆ ಕೊಟ್ಟು ಅವರು ನಮ್ಮ ಪರವಾಗಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ. ಇದೇನಾ ಸಂಸ್ಕೃತಿ ಎಂದು ಕುಟುಕಿದರು.

ನಮ್ಮ ಸಮಾಜದ ಹೆಣ್ಣು ಮಗಳ ಬರ್ಬರ ಹತ್ಯೆಯಾದರೂ ಲಿಂಗಾಯತರ ಹೆಣದ ಮೇಲೆ ಜೋಶಿ ರಾಜಕಾರಣ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.

RELATED ARTICLES
- Advertisment -
Google search engine

Most Popular