Monday, February 2, 2026
Google search engine

Homeಸ್ಥಳೀಯಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಲೋಕಾರ್ಪಣೆ

ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಲೋಕಾರ್ಪಣೆ

ಮೈಸೂರು: ಮೈಸೂರಿನ ಶ್ರೀರಾಂಪುರದ ರಿಂಗ್ ರಸ್ತೆಯ ಹತ್ತಿರ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಉದ್ಘಾಟನೆಯನ್ನು ಬಾಲ ಪ್ರತಿಭೆ ಡಾ ಪೃಥು ಪಿ ಅದ್ವೈತ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲೆಯ ಅಧ್ಯಕ್ಷರಾದ ಶ್ರೀಯುತ ಮಹೇಶ್ ಕಾಮತ್ ರವರು ಇಂದಿನ ಒತ್ತಡದ ಜೀವನದಲ್ಲಿ ನಮಗೆ ಸನಾತನ ಧರ್ಮದ ಜಾಗೃತಿ, ಆಚರಣೆ ಮಾಡುವುದು ಕಡಿಮೆ ಆಗುತ್ತಿದೆ, ಮಕ್ಕಳು ಮೊಬೈಲ್ ಸೇರಿದಂತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಇಂತಹ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಸಂಸ್ಕಾರ ಕಲಿಸುವ ಕೇಂದ್ರಗಳ ಅವಶ್ಯಕತೆ ಇದೆ. ವಿಶ್ವ ಹಿಂದೂ ಪರಿಷತ್ ಹಾಗೂ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಸಹಯೋಗದಲ್ಲಿ ಮೈಸೂರಿನ ಹಲವೆಡೆ ಇಂತಹ ಸಂಸ್ಕಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಅದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಪುನೀತ್ ಜಿ ಕೂಡ್ಲೂರು ನಮ್ಮ ಈ ಸಂಸ್ಕಾರ ಕೇಂದ್ರದಲ್ಲಿ ಶ್ಲೋಕ, ವೇದ, ಭಾರತೀಯ ಆಚರಣೆ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಭಜನೆ ಹೀಗೆ ವಿವಿಧ ತರಗತಿಗಳು ನಡೆಯಲಿವೆ ಹಾಗೂ ಇದೇ ಕೇಂದ್ರದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ದ ವತಿಯಿಂದ ಧರ್ಮ, ಸಂಸ್ಕಾರ, ಸಾಹಿತ್ಯ, ಸಂಗೀತ, ಕಲೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರೀಮತಿ ಇಂದಿರಮ್ಮ ಗುಂಡಪ್ಪ ವೇದಿಕೆ ನಿರ್ಮಿಸಲಾಗಿದೆ ಸಾರ್ವಜನಿಕರು ತಮ್ಮ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಮ್ಮ ಈ ಸಭಾ ಭವನದಲ್ಲಿ ಮಾಡಬಹುದು ಇದರಿಂದ ನಮ್ಮ ಭಾರತೀಯ ಕಲೆ, ಸಂಸ್ಕಾರಗಳ ಉಳಿವಿಗಾಗಿ ನಮ್ಮ ವೇದಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಸ್ಥಳಾವಕಾಶಕ್ಕಾಗಿ ಸಂಯೋಜಕರಾದ ಗಣೇಶ್ 9449408936 ಅಥವಾ 8105366574 ಮೊಬೈಲ್ ಸಂಪರ್ಕಿಸ ಬಹುದು ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ಸಂಸ್ಕಾರ ಕೇಂದ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ವಿಷ್ಣು ಸಹಸ್ರನಾಮ ಪಾರಾಯಣ, ವಿಶ್ವ ಹಿಂದೂ ಪರಿಷತ್ ಸತ್ಸಂಗ ಪ್ರಮುಖರಾದ ಶ್ರೀಮತಿ ರಾಧಾ ಲಕ್ಮಣರಾಜು ರವರ ಸಂಗೀತ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ವಿ.ಹಿಂ.ಪ ಮೈಸೂರು ಜಿಲ್ಲೆಯ ಅಧ್ಯಕ್ಷರಾದ ಮಹೇಶ್ ಕಾಮತ್, ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ದ ಅಧ್ಯಕ್ಷರಾದ ಶ್ರೀಯುತ ಕೆ.ಆರ್.ಗಣೇಶ್ , ಸರಸ್ವತಿ, ಪೂಜಾ‌, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮಾ.ವಿ. ರಾಮಪ್ರಸಾದ್, ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಮೈಸೂರು ಅಧ್ಯಕ್ಷ ರಮಾಕಾಂತ್ ಶಣೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುವೆಂಪು ನಗರದ ಮುಖ್ಯಸ್ಥರಾದ ಗಣೇಶ್ ಜಿ.ಎಸ್ , ಭಾರತ್ ವಿಕಾಸ್ ಪರಿಷತ್ತಿನ ಪದ್ಮ ಪಾಂಡುರಂಗ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸದಸ್ಯರು, ಗ್ಲೋಬಲ್, ವಿಷ್ಣು ಸಹಸ್ರನಾಮ ಜಿಲ್ಲಾ ಸದಸ್ಯರು, ಧಾರ್ಮಿಕ ಮುಖಂಡರು, ಕೂಡ್ಲೂರು ಗುಂಡಪ್ಪ ಕುಟುಂಬದ ಸದಸ್ಯರು, ಸುಧಾ , ನರಸಿಂಹ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular