ಮೈಸೂರು : ಮೈಸೂರು ಮೂಲದ ವಿಜ್ಞಾನಿ ಡಾ. ಶೋಬಿತ್ ರಂಗಪ್ಪ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. SciRank Global Scientist Index–2025 ಪ್ರಕಟಿಸಿರುವ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಅವರು ವಿಶ್ವದ ಅಗ್ರ 5 ಶೇಕಡಾ ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಮೆಡಿಸಿನ್ ಗೆ ಸಂಬಂಧಿಸಿದ ಡಾ. ಶೋಬಿತ್ ರಂಗಪ್ಪ ಅವರಿಗೆ ಜಾಗತಿಕ ಶ್ರೇಯಾಂಕದಲ್ಲಿ 6,65,342ನೇ ಸ್ಥಾನ ಲಭಿಸಿದ್ದು, ಅವರ ಸಂಶೋಧನಾ ಕೊಡುಗೆಗಳು ಹಾಗೂ ವೈಜ್ಞಾನಿಕ ಪ್ರಕಟಣೆಗಳ ಆಧಾರದ ಮೇಲೆ ಈ ಮಾನ್ಯತೆ ನೀಡಲಾಗಿದೆ.
SciRank Global ಸಂಸ್ಥೆಯು ಕಠಿಣ ಬಿಬ್ಲಿಯೋಮೆಟ್ರಿಕ್ ವಿಶ್ಲೇಷಣೆ ಮೂಲಕ ವಿಶ್ವದ ವಿಜ್ಞಾನಿಗಳನ್ನು ಮೌಲ್ಯಮಾಪನ ಮಾಡುತ್ತಿದ್ದು, ಡಾ. ಶೋಬಿತ್ ರಂಗಪ್ಪ ಅವರ ಸಾಧನೆ ಕರ್ನಾಟಕ ಹಾಗೂ ಭಾರತದ ವೈಜ್ಞಾನಿಕ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗೆ ಶೈಕ್ಷಣಿಕ ಮತ್ತು ಸಂಶೋಧನಾ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.



