Saturday, February 14, 2026
Google search engine

Homeರಾಜ್ಯಮಾ. 24 ರಂದು ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವದ ಒತ್ತೆಕೋಲ: ಆಮಂತ್ರಣ ಪತ್ರ ಬಿಡುಗಡೆ

ಮಾ. 24 ರಂದು ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವದ ಒತ್ತೆಕೋಲ: ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.24 ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮತ್ತು ಕೊಳ್ಳಿ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ನಡುಮನೆ ಆಡಳಿತ ಮೊಕೇಸರ ಎನ್‌. ನವಿನಾಥ ರೈ ಪಾಲ್ತಾಡು, ಪಿ.ನಾರಾಯಣ ರೈ ಪಾಲ್ತಾಡು, ವಿಲಾಸ್ ರೈ ಪಾಲ್ತಾಡು, ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತಸರ ಸಂತೋಷ್ ಕುಮಾರ್ ರೈ ನಳೀಲು, ವಿನೋದ್ ರೈ ಪಾಲ್ತಾಡು,ವಿಖ್ಯಾತ್ ರೈ ಪಾಲ್ತಾಡು ಮತ್ತಿತರರು ಉಪಸ್ಥಿತರಿದ್ದರು. ಮಾ. 24 ರಂದು ಮಾಮೂಲು ಪದ್ಧತಿ ಪ್ರಕಾರ ವರ್ಷಂಪ್ರತಿ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ.16 ರಂದು ಗೊನೆ ಮುಹೂರ್ತ ನಡೆಯಲಿದ್ದು, ಮಾ. 25 ರಂದು ಅಗ್ನಿಪ್ರವೇಶ, ಪ್ರಸಾದ ವಿತರಣೆ ಮತ್ತು ಗುಳಿಗನ ಕೋಲ ನಡೆಯಲಿದೆ.

  • ಶಂಶೀರ್ ಬುಡೋಳಿ
RELATED ARTICLES
- Advertisment -
Google search engine

Most Popular